ಚಿತ್ರಕಲೆ ವಿದ್ಯಾರ್ಥಿಗಳಿಗೆ ತಮ್ಮ ಭಾವನೆಗಳು ಆಲೋಚನೆಗಳು ಕತೆಗಳನ್ನ ದೃಶ್ಯ ರೂಪದಲ್ಲಿ ಪ್ರದರ್ಶಿಸಲು ಸಹಕಾರಿ ..
ಚಳ್ಳಕೆರೆ : ಚಿತ್ರಕಲೆ ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣವು ಹಲವು ರೀತಿಯ ಉಪಯೋಗಗಳನ್ನು ಒದಗಿಸುತ್ತದೆ. ಇದು ಕೇವಲ ಸೃಜನಾತ್ಮಕತೆಯನ್ನು ಉತ್ತೇಜಿಸುವುದಷ್ಟೇ ಅಲ್ಲ, ವಿವಿಧ ಕೌಶಲ್ಯಗಳು ಮತ್ತು ಜೀವನದ ಹಾದಿಯಲ್ಲಿ ಸಹಾಯ ಮಾಡುವ ಗುಣಗಳನ್ನು ಬೆಳೆಸುತ್ತದೆ ಎಂದು ಹೆಚ್ ಟಿಟಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ.ವೀರಣ್ಣ ಹೇಳಿದರು….
ನಗರದ ಹೆಗ್ಗರೆ ತಾಯಮ್ಮಸರ್ಕಾರಿ ಬಾಲಕಿಯ ಪ್ರೌಢಶಾಲೆಯಲ್ಲ ಜಿಲ್ಲಾ ಪಂಚಾಯಿತಿ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಜಿಲ್ಲಾ ಹಾಗೂ ತಾಲೂಕು ಬಾಲ ಭವನ ಸಮಿತಿ ,ಚಿತ್ರದುರ್ಗ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಅವರು ಮಾತನಾಡಿದರು….
ಚಿತ್ರಕಲೆ ವಿದ್ಯಾರ್ಥಿಗಳಿಗೆ ತಮ್ಮ ಭಾವನೆಗಳು, ಆಲೋಚನೆಗಳು, ಮತ್ತು ಕತೆಗಳನ್ನು ದೃಶ್ಯ ರೂಪದಲ್ಲಿ ಪ್ರದರ್ಶಿಸಲು ಅವಕಾಶ ನೀಡುತ್ತದೆ.ಇದು ಅವರ ಕಲ್ಪನಾ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಅಷ್ಟೆ ಅಲ್ಲದೆ ಕಲಾಕೃತಿಗಳನ್ನು ರಚಿಸುವಾಗ ವಿದ್ಯಾರ್ಥಿಗಳು ಹೊಸ ದಾರಿಗಳನ್ನು ಹುಡುಕುತ್ತಾರೆ, ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ನವೀನ ರೀತಿಯ ಚಿಂತನೆ ಬೆಳೆಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವಣ್ಣ, ಪ್ರಾಣೇಶ್, ಪ್ರದೀಪ್, ರಾಜಕುಮಾರ್, ಶಿಕ್ಷಕಿ ಉಮಾ, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಕ್ಷಕಿಯರು ಇದ್ದರು…

