ಚಳ್ಳಕೆರೆ ಸುದ್ದಿ
ಕೋಟೆ ನಾಡು ಚಿತ್ರದುರ್ಗದ ಶಾಸಕ ಕೆ ಸಿ ವೀರೇಂದ್ರ ಪಪ್ಪಿಗೆ ಬೇಲ್ :
ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು:
ಚಿತ್ರದುರ್ಗವಿಧಾನಸಭಾ ಕ್ಷೇತ್ರದ ಶಾಸಕ ಕೆಸಿ ವೀರೇಂದ್ರ ಪಪ್ಪಿಗೆ ಇಂದು ಬೇಲ್ ಸಿಕ್ಕಿದ್ದು ಕೆ.ಸಿ ವಿರೇಂದ್ರ ಪಪ್ಪಿ ಅಭಿಮಾನಿಗಳ ಹಾಗೂ ವಿವಿಧ ಸಂಘಟನೆಯ ಮುಖಂಡರು ಸಿಹಿ ಹಂಚ ಪಟಾಕಿ ಸಿಡಿ ಸಂಭ್ರಮಿಸಿದರು..
ಚಳ್ಳಕೆರೆ ನಗರದ ವಾಲ್ಮೀಕಿ ವೃತದ ಬಳಿ ಕೆ ಸಿ ವೀರೇಂದ್ರ ಪಪ್ಪಿ ಅವರ ಭಾವಚಿತ್ರ ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿದರು
ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸ್ವಪ್ನ ವೆಂಕಟೇಶ, ವೈಕುಂಠ ಏಕಾದಶಿ ದಿನವೇ ಚಿತ್ರದುರ್ಗ ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ಅವರಿಗೆ ನ್ಯಾಯಾಲಯದಿಂದ ಬೇಲ್ ಸಿಕ್ಕಿರುವುದು ಸಂತಸ ತಂದಿದೆ. ಅವರಿಗೆ ಈಗ ಬಂದಿರುವ ಕಳಂಕಗಳಿಂದ ಹೊರ ಬಂದೇ ಬರುತ್ತಾರೆ ಬೇಲ್ ಸಿಕ್ಕಿರುವುದು ಶುಭ ಸಮಾಚಾರ ಎಂದರು.
ಇನ್ನು ಈ ವೇಳೆ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ್ ಕುಮಾರ್(ಕುಮ್ಮಿ)ಚಂದ್ರು ಮಾತೃಶ್ರೀ ಮಂಜುನಾಥ, ಶ್ರೀನಿವಾಸ್,ಮಧಕರಿಪಾಪಣ್ಣ, ಸೇರಿದಂತೆ ಕೆಸಿ ವೀರೇಂದ್ರ ಪಪ್ಪಿ ಅಭಿಮಾನಿ ಬಳಗದ ಪದಾಧಿಕಾರಿಗಳು ಮುಖಂಡರು ಇದ್ದರು…

