ದೇಶದ ಆಸ್ತಿ ಎನ್ ಸಿಸಿ ವಿದ್ಯಾರ್ಥಿಗಳು : ಡಾ.ದೇವಪ್ಪ

ಚಳ್ಳಕೆರೆ : ಇಂದಿನ ಯುವ ಸಮೂಹ
ದೇಶದ ಆಸ್ತಿ ಎನ್ ಸಿಸಿ ವಿದ್ಯಾರ್ಥಿಗಳು ಹೆಚ್ಚು ದೇಶ ಸೇವೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಗಟ್ಟಿಯಾದ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಡಾ. ಎಮ್. ಕೆ .ದೇವಪ್ಪ ಪ್ರಾಂಶುಪಾಲರು ಹೇಳಿದರು.

ಅವರು ನಗರದ ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್ ಸಿ ಸಿ ಘಟಕಕ್ಕೆ ಶೇಕಡ 100% ಫಲಿತಾಂಶ ಈ ಕಾಲೇಜಿನ ಬಿ ಮತ್ತು ಸಿ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಯುವಕರು ಭಾರತೀಯ ಸೇನೆಗೆ ಹಾಗೂ ಕೇಂದ್ರ ಸರ್ಕಾರದ ಕೆಲ ಹುದ್ದೆಗಳಿಗೆ ಮತ್ತು ಉನ್ನತ ಶಿಕ್ಷಣಕ್ಕೆ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹೊಂದಲು NCC ಗುಣಗಳು ಹಾಗೂ ಸರ್ಟಿಫಿಕೇಟ್ ಸಹಕಾರಿಯಾಗಿದೆ,
ಈ ಕಾಲೇಜಿನಲ್ಲಿ ನೂರರಷ್ಟು ಫಲಿತಾಂಷ ಬಂದಿರುವುದು ಸಂತಸದ ಸಂಗತಿ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೇನೆ ಹಾಗೂ ಇತರೆ ಉದ್ಯೋಗಗಳಲ್ಲಿ ಸೇರುವುದರಿಂದ ಕಾಲೇಜಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

NCC ಅಧಿಕಾರಿಗಳಾದ ಲೆಫ್ಟಿನೆಂಟ್ ಡಾ.ಸ.ರಾ.ಲೇಪಾಕ್ಷ ಮಾತನಾಡಿ, ಎನ್ ಸಿಸಿ ಯಿಂದ ಯುವಕರು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಎನ್ ಸಿಸಿ‌ ಸರ್ಟಿಫಿಕೇಟ್ ಪಡೆಯುವ ಮೂಲಕ ಹೆಚ್ಚು ಹೆಚ್ಚು ಉದ್ಯೋಗವಕಾಶಗಳು ಗಿಟ್ಟಿಸಿಕೊಂಡು ದೇಶ ಸೇವೆಗೆ ಸಿದ್ದರಾಗಬೇಕು ಎಂದರು.

ಈ ಸಂದರ್ಭದಲ್ಲಿ ಸುಬೇದಾರ್ ರಮಣರೆಡ್ಡಿ ಲ, ಮನೋಹರ್ ಸಿಂಗ್, ಸೇನೆಯ ಅಧಿಕಾರಿಗಳು ಮತ್ತು ಎನ್ ಸಿ ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೋಟೋ : ಚಳ್ಳಕೆರೆ ನಗರದ ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ ಸಿಸಿ
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಶುಂಪಾಲ ಡಾ.ದೇವಪ್ಪ ಪ್ರಮಾಣ ಪತ್ರ ವಿತರಿಸಿದರು.

About The Author

Namma Challakere Local News
error: Content is protected !!