ಚಳ್ಳಕೆರೆ :
ಬೆಳೆ ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು, ಹಾಗೂ ಪಿಆರ್ ಓ ಗಳು ಬೆಳೆಯ ನಿಖರವಾದ ಮಾಹಿತಿಯನ್ನು ಆನ್ ಲೈನ್ ಗೆ ದಾಖಲಿಸಬೇಕು ಎಂದು ಜಿಲ್ಲಾ ಜಂಟಿ ನಿರ್ದೇಶಕ ಉಮೇಶ್ ಹೇಳಿದರು.
ಅವರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ಬೆಳೆ ಸಮೀಕ್ಷೆ ತರಬೇತಿ ಕಾರ್ಯಾಗಾರದಲ್ಲಿ ತರಬೇತುದಾರರಿಗೆ ಮಾಹಿತಿ ನೀಡಿದರು.
ರೈತರ ಬೆಳೆ ಹಾಗೂ ವಿಸ್ತೀರ್ಣ ಮಿಶ್ರ ಬೆಳೆ ಈಗೆ ಸಂಪೂರ್ಣವಾದ ಬೆಳೆ ವಿವರಗಳನ್ನು ಹಾಗೂ ವಿಸ್ತೀರ್ಣವನ್ನು ನಿಖರವಾದ ದತ್ತಾಂಶಗಳನ್ನು ಆನ್ಲೈನ್ ಗೆ ದಾಖಲಿಸಬೇಕು, ಇದರಿಂದ ನೀವು ದಾಖಲಿಸಿದ ದತ್ತಾಂಶ ನಮ್ಮ ದೇಶಕ್ಕೆ ಉಪಯುಕ್ತವಾಗುತ್ತಿದೆ ಎಷ್ಟು ಜನ ರೈತರು ಎಷ್ಟು ಬೆಳೆ ಬಿತ್ತನೆ ಮಾಡಿದ್ದಾರೆ ಎಷ್ಟು ಎಕ್ಟರ್ ಬಿತ್ತನೆಯಾಗಿದೆ, ಎಂಬಲ್ಲೆ ಮಾಹಿತಿ ಉಪಯುಕ್ತವಾಗುತ್ತದೆ.
ಹೀಗೆ ಬೆಳೆ ಸಮೀಕ್ಷೆ ಮುಗಿದ 15 ದಿನಗಳ ನಂತರ ರೈತರು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ ನೇರವಾಗಿ ತಮ್ಮ ಮೊಬೈಲ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು ಇನ್ನು ಅವಿದ್ಯಾವಂತರಾದ ರೈತರು ಕೃಷಿ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ತಮ್ಮ ನಿಖರವಾದ ಬೆಳೆ ಮರು ಸಮೀಕ್ಷೆ ಮಾಡಿಸಲು ಅವಕಾಶ ಪಡೆದುಕೊಳ್ಳಬಹುದು ಎಂದು ಹೇಳಿದರು.
ಇನ್ನೂ ರೈತರು ಬೆಳೆ ಸಮಿಕ್ಷೆಗೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 15 ರವರೆಗೂ ಆಕ್ಷೇಪಣಾ ಅರ್ಜಿ ಸಲ್ಲಿಸಲು ರೈತನಿಗೆ ಅವಕಾಶವಿದೆ ಆದ್ದರಿಂದ ಪಿಆರ್ ಗಳು ಹಾಗೂ ಮೇಲ್ಚಿಚಾರಣ ಅಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ಯಾವುದೇ ಲೋಪದೋಷ ಆಗದಂತೆ ಸ್ಥಳಕ್ಕೆ ತೆರಳಿ ಖುದ್ದಾಗಿ ದತ್ತಾಂಶ ದಾಖಲಿಸಬೇಕ,
ಈ ಹಿಂದೆ ಮಾಡಿದಂತೆ ವಿಸ್ತೀರ್ಣ ಅಂದಾಜು ಮಾಡುವುದು ಬೇಡ ನಿಖರವಾದ ದಾಖಲಾತಿಯನ್ನು ದತ್ತಾಂಶದಲ್ಲಿ ದಾಖಲಿಸಬೇಕು ಒಬ್ಬ ರೈತ ಕನಿಷ್ಠ ಐದರಿಂದ ಆರು ಬೆಳೆಗಳನ್ನು ಹಾಕಿರುತ್ತಾನೆ. ಇದರಿಂದ ಯಾವುದೇ ರೈತನಿಗೆ ನಷ್ಟ ಆಗದಂತೆ ಆ ಎಲ್ಲಾ ಬೆಳೆಗಳನ್ನು ನಮೂದು ಮಾಡಬೇಕು ವಾರಕ್ಕೆ ಎರಡು ಬಾರಿಯಾದರೂ ಮೇಲ್ವಿಚಾರಣೆ ಅಧಿಕಾರಿಗಳು ತ್ವರಿತಗತಿಯಲ್ಲಿ ದತ್ತಾಂಶ ಪರಿಶೀಲಿಸಿ ದತ್ತಾಂಶ ಮುಂದಕ್ಕೆ ರವಾನಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್, ತೋಟಗಾರಿಕಾ ಅಧಿಕಾರಿ ರಾಜು ನಾಯಕ್, ರೇಷ್ಮೆಇಲಾಖೆ ಅಧಿಕಾರಿಗಳು, ಎಓ ತಿಪ್ಪೇಸ್ವಾಮಿ, ಜೀವನ್, ಮಂಜುನಾಥ್, ಕೃಷಿ ತಾಂತ್ರಿಕ ಅಧಿಕಾರಿ ಮೇಘನ,ಗುರುಪ್ರಸಾದ್, ಇನ್ನು ತಾಲೂಕು ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿ ಆರ್ ಓ ಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು


