ಚಳ್ಳಕೆರೆ : ರಾತ್ರಿವೆಳೆ ರಸ್ತೆ ಮಧ್ಯದಲ್ಲಿ ರಿಪ್ಲೆಕ್ಟರ್ ಇಲ್ಲದೆ ಇರುವ ಕಾರಣ
ರಸ್ತೆ ಮಧ್ಯದ ಡಿವೈಡರ್ ಗೆ ಲಾರಿ ಡಿಕ್ಕಿ ಹೊಡೆದು ಪ್ರಾಣ ಅಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಮುಖ್ಯ ರಸ್ತೆಗೆ ಡಿವೈಡರ್ ನಿರ್ಮಿಸಿದ್ದು ಇಲ್ಲಿ ಯಾವುದೇ ರಸ್ತೆ ಸುರಕ್ಷತಾ ಫಲಕ ಹಾಗೂ ಚಾಲಕರಿಗೆ ಸೂಚನೆ ನೀಡುವ ಸ್ಟಿಕ್ಕರ್ ಅಳವಡಿಸದೇ ಇರುವುದರಿಂದ ಪದೆ ಪದೇ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ಅಂದ್ರದ ಕಲ್ಯಾಣದುರ್ಗದಿಂದ ಚಳ್ಳಕೆರೆಗೆ ಬರುತ್ತಿದ್ದ ಲಾರಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೂಡಲೆ ಈ ಸ್ಥಳಕ್ಕೆ ಸಂಚಾರಿ ನಿಯಮ ಫಲಕ ಅಥವಾ ಸ್ಟಿಕ್ಕರ್ ಅಂಟಿಸುವಂತೆ ಗ್ರಾಮದ ಚಿತ್ತಯ್ಯ ಇತರರು ಆಗ್ರಹಿಸಿದ್ದಾರೆ.

