ಚಳ್ಳಕೆರೆ : ಒಂದೇ ಸ್ಥಳಕ್ಕೆ ಇಬ್ಬರ ಮಹನೀಯರ ವೃತ್ತಕ್ಕೆ ಅನುಮೋದನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ ನಗರಸಭೆ ಅಧಿಕಾರಿಗಳ ವಿರುದ್ಧ ನಗರಸಭೆ ನಾಮನಿರ್ದೇಶನ ಸದಸ್ಯ ವೀರಭದ್ರಪ್ಪ ಕಿಡಿಕಾರಿದ್ದಾರೆ.
ಹೌದು ಚಳ್ಳಕೆರೆ ನಗರದ ಪಾವಗಡ ರಸ್ತೆ ಬಾಲಜಿ ಚಿತ್ರಮಂದಿರ ಮುಂಬಾಗದ ಕಾಟಪನಹಟ್ಟಿಗೆ ಹೊಗುವ ರಸ್ತೆಯ ಮಾರ್ಗದ ವೃತ್ತಕ್ಕೆ ಡಿಎಸ್ ಎಸ್ ಸಂಸ್ಥಾಪಕರಾದ ಕೃಷ್ಣಪ್ಪರವರ ವೃತ್ತ ಮಾಡಬೇಕು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಿ ಪತ್ರಿಕಾ ಪ್ರಕಟಣೆಗೆ ನೀಡಲಾಗುತ್ತು, ಆದರೆ ಈ ಏಕಾಏಕಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಎಂದು ಸಮುದಾಯದವರು ಭಾವ ಚಿತ್ರದ ಪ್ಲೆಕ್ಸ್ ಕಟ್ಟಿ ಹೂವು ಹಾಕಿರುವುದು ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜಾತಿ ಜಾತಿ ಮಧ್ಯೆ ಗಲಬೆ ಮಾಡಿಸುವ ಹುನ್ನಾರ ಅಧಿಕಾರಿಗಳು ಮಾಡುತ್ತಿದ್ದಾರೆ.
ಆದ್ದರಿಂದ ಈ ಕೂಡಲೇ ನಗರಸಭೆ ಪೌರಾಯುಕ್ತರು ಸ್ಥಳ ಪರೀಶಿಲನೆ ಮಾಡಿ ಮೊದಲ ನೀಡಿದ ಅರ್ಜಿ ಹಾಗೂ ಸೂಕ್ತವಾದ ಚರ್ಚೆಯ ಮೂಲಕ ವೃತ್ತ ಕ್ಕೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಸಮುದಾಯದ ಮುಖಂಡ ಗೌರೀಶ್, ಗೌವರ್ದನ, ಓಬಣ್ಣ, ಜಯಣ್ಣ, ಕಾರ್ತಿಕ್, ಕೃಷ್ಣಪ್ಪ, ಮಂಜುನಾಥ್, ತಿಮ್ಮಣ್ಣ, ಸತೀಶ್ ಇತರರು ಹಾಜರಿದ್ದರು.
ಅನುಮೋದನೆ ಪಡೆಯದೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ : ಡಿಎಸ್ ಎಸ್ ಆರೋಪ..


