ಚಳ್ಳಕೆರೆ :ಚಿತ್ರದುರ್ಗ: ಕ್ರಿಶ್ಚಿಯನ್ನರು ದಸರಾವನ್ನು ಹತ್ತಿಕ್ಕುತ್ತಿದ್ದಾರೆ
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
ಅವರು, ಸರ್ಕಾರವು ದಸರಾ ರಜೆಯನ್ನು 12 ದಿನಗಳಿಗೆ ವಿಸ್ತರಿಸಿ
ಅಧಿಸೂಚನೆ ಹೊರಡಿಸಿದ್ದರೂ, ಕ್ರಿಶ್ಚಿಯನ್ ಸಂಸ್ಥೆಗಳು ಈ
ರಜೆಯನ್ನು ಮೊಟಕುಗೊಳಿಸಿ ಕ್ರಿಸ್‌ಮಸ್ ಹಬ್ಬಕ್ಕೆ ನೀಡುತ್ತಿವೆ
ಎಂದು ಚಿತ್ರದುರ್ಗದಲ್ಲಿಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ವಿಖ್ಯಾತ ದಸರಾ ಹಬ್ಬವನ್ನು ಕ್ರಿಶ್ಚಿಯನ್ನರು ಹತ್ತಿಕ್ಕುವ ಕೆಲಸ
ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

