ಚಿತ್ರದುರ್ಗ: ವಿದ್ಯಾರ್ಥಿ ನಿಲಯಗಳಲ್ಲಿ ಅವ್ಯವಹಾರ
ಕ್ರಮಕ್ಕೆ ಆಗ್ರಹ
ಚಿತ್ರದುರ್ಗದ ಬಂಜಾರ ಬಾಲಕ ಬಾಲಕಿಯರ ವಿದ್ಯಾರ್ಥಿ
ನಿಲಯದಲ್ಲಿ 2004 ರಲ್ಲಿ ಕಾರ್ಯದರ್ಶಿಯಾಗಿದ್ದ ನರೇನಹಳ್ಳಿ
ಅರುಣ್ ಕುಮಾರ್ ಅವರಿಂದ ಸಾಕಷ್ಟು ಅವ್ಯವಹಾರ ನಡೆದಿದೆ
ಎಂದು ಬಂಜಾರ ಸಮಾಜದ ಮುಖಂಡ ಮಂಜಾ ನಾಯ್ಕ‍
ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ
ಮಾತನಾಡಿದ ಅವರು, ಅರುಣ್ ಕುಮಾರ್ ರೌಡಿಯಂತೆ ವರ್ತಿಸಿ
ಸಮಾಜಕ್ಕೆ ವಂಚಿಸಿದ್ದಾರೆ. ಅಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿದ್ದರು
ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಅವರ ವಿರುದ್ಧ
ಕ್ರಿಮಿನಲ್ ಮೊಕದ್ದಮೆ ಹೂಡಲಿಲ್ಲ ಎಂದು ಅವರು ದೂರಿದರು.

About The Author

Namma Challakere Local News
error: Content is protected !!