“ಪಿರಮಿಡ್ ಧ್ಯಾನ ಕೇಂದ್ರಗಳ ವತಿಯಿಂದ ಮಕ್ಕಳಿಗಾಗಿ ಧ್ಯಾನಾಭ್ಯಾಸ ಕಾರ್ಯಕ್ರಮ”.
ಚಳ್ಳಕೆರೆ:-ನಗರದ ತ್ಯಾಗರಾಜನಗರದ ಶ್ರೀವೀರಭದ್ರೇಶ್ವರ ಪಿರಮಿಡ್ ಧ್ಯಾನ ಕೇಂದ್ರ ಹಾಗೂ ಹಳೇನಗರದ ಪತ್ರೀಜಿ ಧ್ಯಾನಾಮೃತ ಕೇಂದ್ರದ ವತಿಯಿಂದ “ಅಂತಾರಾಷ್ಟ್ರೀಯ ಯೋಗ ದಿನಾಚರಣೆ”ಯ ಪ್ರಯುಕ್ತ ನಗರದ ಸ್ವಾಮಿ ವಿವೇಕಾನಂದ ಶಾಲೆ,ಚಿನ್ಮಯ ಶಾಲೆ,ವಿದ್ಯಾಭಾರತಿ ಶಾಲೆ,ಸಹ್ಯಾದ್ರಿ, ವಾಸವಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳಲ್ಲಿ ಧ್ಯಾನಾಭ್ಯಾಸ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಧ್ಯಾನದ ಬಗ್ಗೆ ಮಾಹಿತಿಯನ್ನೊಳಗೊಂಡ ಕರಪತ್ರ ಮತ್ತು “ಧ್ಯಾನ ತಾಂಬೂಲ” ಪುಸ್ತಕ ಕೈಪಿಡಿಯನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಧ್ಯಾನಬಂಧುಗಳಾದ ಶ್ರೀಮತಿ ಸೌಮ್ಯ ಉಮೇಶ್,ಹೂವಿನ ಲಕ್ಷ್ಮೀದೇವಮ್ಮ, ಮಹಾದೇವಿ ತಿಪ್ಪೇಸ್ವಾಮಿ, ನೇರಲಗುಂಟೆ ರಾಜಣ್ಣ ಸೇರಿದಂತೆ ಶಿಕ್ಷಕರು, ಮಕ್ಕಳು ಹಾಗೂ ಧ್ಯಾನಬಂಧುಗಳು ಪಾಲ್ಗೊಂಡಿದ್ದರು.

