ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ
ಮಡಿವಾಳ ಮಾಚಿದೇವ ಜಯಂತಿ ಆಚರಣೆಗೆ
ಸಂಬಂಧಿಸಿದ ಪೂರ್ವಭಾವಿ ಸಭೆ ನಡೆಯಿತು. ಫೆಬ್ರವರಿ
1ರಂದು ನಡೆಯುವ ಮಡಿವಾಳ ಮಾಚಿದೇವ
ಜಯಂತಿಯನ್ನು ತಾಲೂಕಿನ ಸಮುದಾಯದ ಎಲ್ಲಾ
ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ
ಅದ್ದೂರಿಯಾಗಿ ಆಚರಿಸುವಂತೆ ಸಭೆಯಲ್ಲಿ ಮನವಿ
ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ
ಸಮಿತಿವತಿಯಿಂದ ಫೆಬ್ರವರಿ 2ರಂದು ಮಡಿವಾಳ
ಮಾಚಿಪ್ರಭುದೇವರ ಜಯಂತಿ ಆಚರಣೆಗೆ ಸಂಬಂಧಿಸಿದ
ಪೂರ್ವಭಾವಿ ಸಭೆಯೂ ನಡೆಯಿತು. ಈ ಸಭೆಯಲ್ಲಿ
ಮಡಿವಾಳ ದಮಾಜದ ಮುಖಂಡರು ಉಪಸ್ಥಿತರಿದ್ದು,
ಜಯಂತಿ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಹಾಗೂ
ಸಮರ್ಪಕವಾಗಿ ಆಯೋಜಿಸುವ ಕುರಿತು ಚರ್ಚೆ
ನಡೆಸಲಾಯಿತು.

