ಚಳ್ಳಕೆರೆ :
ಚಿತ್ರದುರ್ಗ: ಸಾಧಾರಣವಾಗಿ ಸುರಿದ ಮಳೆ
ಚಿತ್ರದುರ್ಗ ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸಾಧಾರಣ
ಮಳೆಯಾಗಿದ್ದು, ಚಿತ್ರದುರ್ಗದಲ್ಲಿ 5. 5 ಮಿ. ಮೀ, ಭರಮಸಾಗರ
1.9 ಮಿ. ಮೀ, ಹಿರೇಗುಂಟನೂರು 0.1 ಮಿ. ಮೀ,
ತುರುವನೂರು 3.8 ಮಿ. ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ
ತಿಳಿಸಿದೆ. ಬಿಸಿಲ ಬೇಗೆಯಿಂದ ಹೈರಾಣಾಗಿದ್ದ ಜನತೆಗೆ ವರುಣ
ದೇವ ತಂಪನೆರೆದಿದ್ದಾನೆ. ಒಟ್ಟಿನಲ್ಲಿ ಮಳೆಯಿಂದ ತಣ್ಣನೆಯ
ವಾತಾವರಣವು ಕಂಡು ಬಂದಿದ್ದು, ರೈತರು ಸಾರ್ವಜನಿಕರ
ಮೊಗದಲ್ಲಿ ಸಂತಸ ಮೂಡಿದೆ.

