ನಗರದಲ್ಲಿ ಸ್ವಚ್ಛತೆ ಇಲ್ಲದ ಹೋಟೆಲ್ ಗಳ ಬಂದ್ ಮಾಡಿಸಿದ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು…

ಚಳ್ಳಕೆರೆ ನಗರಸಭೆ ಅಧ್ಯಕ್ಷರಾದ ಶಿಲ್ಪ ಮುರಳಿಧರ್ ಹಾಗೂ ನಗರಸಭೆ ಉಪಾಧ್ಯಕ್ಷರಾದ ಕವಿತಾ ಬೋರಯ್ಯ, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯ ರಾದ ಮಂಜುಳಾ ಆರ್ ಪ್ರಸನ್ ಕುಮಾರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮತ್ತು ನಗರಸಭೆ ಸದಸ್ಯೆ ಸುಜಾತ ಪ್ರಹ್ಲಾದ್. ಹಾಗೂ ನಗರಸಭೆ ಪೌರಯುಕ್ತ ಜಗ್ಗರೆಡ್ಡಿ ಇವರ ನೇತೃತ್ವದಲ್ಲಿ ಇಂದು ನಗರದ ವಿವಿಧ ತಿಂಡಿ ಹೋಟೆಲ್ ಗಳ ಮೇಲೆ ದಾಳಿ ಮಾಡಿ ಸ್ವಚ್ಛತೆ ಇಲ್ಲದ ಹೋಟೆಲ್ ಗಳನ್ನ ಬಂದ್ ಮಾಡಿಸಿದ್ದಾರೆ…

ಬೆಳ್ಳಂ ಬೆಳಗ್ಗೆ ಹೋಟೆಲ್ ಹಾಗೂ ರಸ್ತೆ ಬದಿಯ ಹೋಟೆಲ್ ಗಳ ಮೇಲೆ ದಾಳಿ ಮಾಡಲಾಗಿದ್ದು ನಗರದ ನೆಹರು ವೃತ್ತದ ಸಮೀಪ ಇರುವ ರವಿ ಹೋಟೆಲ್ ನಲ್ಲಿ ಸ್ವಚ್ಛತೆ ಇಲ್ಲದ ಕಾರಣ ಹೋಟೆಲ್ ಬದ್. ಮಾಡಿಸಿ ಎಚ್ಚರಿಕೆ ನೀಡಿದ್ದಾರೆ..

ಅಲ್ಲದೆ ರಸ್ತೆಯ ಅಕ್ಕ ಪಕ್ಕದಲ್ಲಿನ ಪುಟ್ಬಾತ್ ತಿಂಡಿ ಹೋಟೆಲ್ಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಲ್ಲದೆ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಹಾಗೂ ಹೋಟೆಲ್ಗಳಲ್ಲಿ ಸ್ವಚ್ಛತೆ ಇಲ್ಲದೆ ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ನಗರಸಭೆ ಅಧ್ಯಕ್ಷ ಶಿಲ್ಪ ಮುರಳಿ ತಿಳಿಸಿದ್ದಾರೆ..

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರು ಕವಿತಾ ಬೋರಯ್ಯ ನಗರಸಭೆ ಸದಸ್ಯರಾದ ಸುಜಾತ ಮಂಜುಳ ನಗರಸಭೆ ಅಧಿಕಾರಿಗಳಾದ ಸತೀಶ್ ಆರೋಗ್ಯ ಅಧಿಕಾರಿಗಳಾದ ಮಹಾಲಿಂಗಪ್ಪ ಗಣೇಶ್ ಹಾಗೂ ಸಿಬ್ಬಂದಿಗಳಾದ ಭದ್ರಪ್ಪ ರಾಜೇಶ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಇದ್ದರು….

About The Author

Namma Challakere Local News
error: Content is protected !!