ಆಸ್ತಿ ತೆರಿಗೆ ಪಾವತಿ: ಆ.10 ರವರೆಗೆ ಅವಧಿ ವಿಸ್ತರಣೆ

ನಾಯಕನಹಟ್ಟಿ: ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 16 ವಾರ್ಡುಗಳ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5ರ ರಿಯಾಯಿತಿಯ ಅವಧಿಯನ್ನು ಆಗಸ್ಟ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಇಲ್ಲಿನ
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್ ತಿಳಿಸಿದ್ದಾರೆ.

ಶುಕ್ರವಾರ ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾಯಕನಹಟ್ಟಿ ಪಟ್ಟಣ ಪಂಚಾಯತಿ 16 ವಾರ್ಡಿನ ಸಾರ್ವಜನಿಕರು ಇ- ಆಸ್ತಿಯ ಮಾಡಿಸಲು ರಾಜ ಸರ್ಕಾರ ದಿನಾಂಕ 10.02.2025 ರಿಂದ 10 .5. 2025 ರವರೆಗೆ ಅವಕಾಶ ನೀಡಿತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಘನ ಸರ್ಕಾರ ಆಗಸ್ಟ್ 10.8 .2025 ವರೆಗೆ ವಿಸ್ತರಿಸಿ ಇ- ಆಸ್ತಿ ಮಾಡಿಸಲು ಅವಕಾಶ ನೀಡಿದೆ.

ಆದ್ದರಿಂದ ಪಟ್ಟಣ ಪಂಚಾಯತಿ ವ್ಯಾಪ್ತಿಯ 16 ವಾರ್ಡಿನ ಸಾರ್ವಜನಿಕರು
ಈ ಅವಕಾಶವನ್ನು ಸದುಪಯೋಗ ಪಡೆದುಕೊಂಡು ನಿಗಧಿತ ಅವಧಿಯಲ್ಲಿ ತೆರಿಗೆ ಪಾವತಿಸಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಸಹಕರಿಸಬೇಕು. ಮತ್ತು 16 ವಾರ್ಡಿನ ಆಸ್ತಿಯ ದಾಖಲಾತಿಗಳು ಪಟ್ಟಣ ಪಂಚಾಯಿತಿ ಕಚೇರಿಗೆ ಸಲ್ಲಿಸಿ, ಇ- ಖಾತೆ ಪಡೆದುಕೊಂಡು ಆಸ್ತಿಯ ಮಾಲೀಕತ್ವ ಪಡೆದುಕೊಳ್ಳಬೇಕು ಈ ಮೂರು ತಿಂಗಳ ಅವಧಿಯಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 1. 2 .3 .4. 5. 6. ವಾರ್ಡ್ ಗಳಲ್ಲಿ ಕ್ಯಾಂಪ್ ಅವಕಾಶ ಕಲ್ಪಿಸಿ ಸಾರ್ವಜನಿಕರಿಗೆ ಸ್ಥಳದಲ್ಲಿ ಇ- ಖಾತೆ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Namma Challakere Local News
error: Content is protected !!