“ನಾಮ ಸಂಕೀರ್ತನೆಯನ್ನು ಜನಪ್ರಿಯಗೊಳಿಸಿದವರು ಶ್ರೀಚೈತನ್ಯ ಮಹಾಪ್ರಭುಗಳು”- ಮಾತಾಜೀ ತ್ಯಾಗಮಯೀ

ಚಳ್ಳಕೆರೆ-ನಾಮ ಸಂಕೀರ್ತನೆಯನ್ನು ಜನಪ್ರಿಯಗೊಳಿಸಿದವರು ಶ್ರೀಚೈತನ್ಯ ಮಹಾಪ್ರಭುಗಳು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಹೇಳಿದರು.ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಶ್ರೀಚೈತನ್ಯ ಮಹಾಪ್ರಭುಗಳ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಮತ್ತು ಸಂದೇಶಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅವರು ತಾವು ಕೈಗೊಂಡ ಮಹಾ ಕುಂಭಮೇಳ ಯಾತ್ರೆಯ ಅನುಭವಗಳನ್ನು ಸದ್ಭಕ್ತರೊಂದಿಗೆ ಹಂಚಿಕೊಂಡರು. ಈ ಜಯಂತ್ಯುತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ನಾಮ ಸಂಕೀರ್ತನೆ ನಡೆಯಿತು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್,ಶ್ರೀಪಾದ್, ಶ್ರೀಮತಿ ಗೀತಾ ನಾಗರಾಜ್,ಯತೀಶ್ ಎಂ ಸಿದ್ದಾಪುರ, ಹಣ್ಣಿನ ವ್ಯಾಪಾರಿ ವೆಂಕಟೇಶ್,ಮಂಜುಳ ಉಮೇಶ್,ಸುಮನ ಕೋಟೇಶ್ವರ, ರತ್ನಮ್ಮ ಚೆನ್ನಬಸಪ್ಪ,ಪಂಕಜ,ಉಷಾ ಶ್ರೀನಿವಾಸ್ ಸೌಮ್ಯ,ಸಿ.ಎಸ್ ಭಾರತಿ,ಅಂಬುಜಾ, ರಶ್ಮಿ ವಸಂತ,ಕೆ.ಎಸ್ ವೀಣಾ,ಚೇತನ್, ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!