ಚಳ್ಳಕೆರೆ :
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಒಬ್ಬ ವೀರ ಮಹಿಳೆ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು,
ತನ್ನ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಸಮರ ಸಾರಿದ ಇವರು, ಶೌರ್ಯ, ಧೈರ್ಯ, ಮತ್ತು ಸ್ವಾಭಿಮಾನದ ಸಂಕೇತವಾಗಿ ಕನ್ನಡಿಗರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಓ.ಶಶಿಧರ್ , ರಾಜ್ಯವನ್ನು ಉಳಿಸಿಕೊಳ್ಳಲು ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡರು, ಇದು ಬ್ರಿಟಿಷ್ ಆಡಳಿತಕ್ಕೆ ಸವಾಲೊಡ್ಡಿತು. ಕೊನೆಯಲ್ಲಿ, ಬೈಲಹೊಂಗಲದ ಕೋಟೆಯಲ್ಲಿ ಸೆರೆ ಸಿಕ್ಕಿ ೧೮೨೯ ರಲ್ಲಿ ನಿಧನರಾದರು.
ಕಿತ್ತೂರು ರಾಣಿ ಚೆನ್ನಮ್ಮನ ಜೀವನ ಮತ್ತು ಹೋರಾಟ ಕಿತ್ತೂರಿನ ದೇಸಾಯಿ ಮಲ್ಲಸರ್ಜನರ ಕಿರಿಯ ಪತ್ನಿಯಾಗಿ, ತಮ್ಮ ರಾಜ್ಯವನ್ನು ಬ್ರಿಟಿಷರಿಂದ ರಕ್ಷಿಸಲು ಹೋರಾಡಿದರು ಎಂದರು.
ನಗರಸಭೆ ಅಧ್ಯಕ್ಷೆ ಶಿಲ್ಪಾ ಮಾತನಾಡಿ,
ದತ್ತು ಪುತ್ರ ಪತಿ ಮತ್ತು ಮಗನ ಮರಣದ ನಂತರ, ಶಿವಲಿಂಗಪ್ಪನಿಗೆ ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ದತ್ತು ಪಡೆದರು ಎಂದರು.
ಸಮುದಾಯದ ಮುಖಂಡ ಕೆಟಿ.ಶಿವಕುಮಾರ್ ಮಾತನಾಡಿ,
ಬ್ರಿಟಿಷರು ದತ್ತು ಪುತ್ರನನ್ನು ಆಡಳಿತದ ಉತ್ತರಾಧಿಕಾರಿಯಾಗಿ ಒಪ್ಪಲು ನಿರಾಕರಿಸಿದಾಗ ಚೆನ್ನಮ್ಮ ಹೋರಾಟಕ್ಕಿಳಿದರು.
ಶಸ್ತ್ರಸಜ್ಜಿತ ಹೋರಾಟ ೧೮೨೪ ರಲ್ಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಶಸ್ತ್ರಸಜ್ಜಿತ ಪಡೆಯನ್ನು ಮುನ್ನಡೆಸಿದರು ಮತ್ತು ಆರಂಭಿಕ ಯುದ್ಧಗಳಲ್ಲಿ ವಿಜಯ ಸಾಧಿಸಿದರು ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನಾ, ಸದಸ್ಯೆ ಕವಿತಾ, ಸುಮಾ, ರಾಘವೇಂದ್ರ, ರಮೇಶ್, ಸ್ವಾಮಿ , ಕೆ.ಟಿ.ಶಿವಕುಮಾರ್, ಪ್ರಕಾಶ್, ಕಿರಣ್, ತಹಶಿಲ್ದಾರ್ ರೇಹಾನ್ ಪಾಷ, ಇಓ ಶಶಿಧರ್, ಡಿವೈಎಸ್ ಪಿ ಸತ್ಯನಾರಾಯಣ ರಾವ್, ಪೌರಾಯುಕ್ತ ಜಗರೆಡ್ಡಿ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಅಧ್ಯಕ್ಷೆ ಮಂಜುಳಾ, ಇತರ ಮುಖಂಡರು, ಅಧಿಕಾರಿಗಳ ಪಾಲ್ಗೊಂಡಿದ್ದರು.


