ಯುವಜನತೆ ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸುವ ಪಣ ತೊಡಬೇಕು: ಪ್ರಾಂಶುಪಾಲೆ ಪುಷ್ಪಲತಾ ಕರೆ

ಚಳ್ಳಕೆರೆ: ತಂಬಾಕು ವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಪ್ರತಿಯೊಬ್ಬರು ತಂಬಾಕು ವಸ್ತುಗಳನ್ನು ಇನ್ನು ಮುಂದೆ ಉಪಯೋಗಿಸುವುದಲ್ಲವೆಂದು ಶಪಥ ಮಾಡಿಬೇಕೆಂದುಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಲತಾ ಕರೆ ನೀಡಿದರು.

ನಗರದ ಅಂಬೇಡ್ಕರ್ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಂಬಾಕು ಸೇವನೆಯಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ತಂಬಾಕು ಸೇವನೆಯ ಜಾಹೀರಾತುಗಳಿಂದ ಮೋಸ ಹೋಗಬೇಡಿ ತಂಬಾಕು ವ್ಯಸನಿಯಿಂದ ಇಡೀ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ವಿದ್ಯಾರ್ಥಿಗಳು ಇಂತಹ ದುಷ್ಚಟಗಳಿಂದ ದೂರವಿದ್ದು ಉತ್ತಮ ಶಿಕ್ಷಣ ಪಡೆಯುವ ಮೂಲಕ ಜೀವನ ರೂಪಿಸಿಕೊಂಡು ತಮ್ಮ ಪೋಷಕರಿಗೆ ಕೀರ್ತಿ ತರುವಂತಾಗಬೇಕು ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಶಾಂತಕುಮಾರಿ ಮಾತನಾಡಿ ಯುವ ಸಮೂಹ ಹಾಗೂ ಸಾರ್ವಜನಿಕರು ತಂಬಾಕು ತ್ಯಜಿಸುವ ಕಡೆಗೆ ಗಮನ ನೀಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ತಂಬಾಕು ಸೇವನೆಯ ಅಭ್ಯಾಸ ಬಿಡಲು ವ್ಯಸನ ಮುಕ್ತ ಕೇಂದ್ರಗಳು ಇವೆ ಪೋಷಕರು ತಮ್ಮ ಮಕ್ಕಳ ಮುಂದೆ ದುಶ್ಚಟದ ಹವ್ಯಾಸಗಳನ್ನು ಮಾಡಿದರೆ ಮಕ್ಕಳು ಅದರಿಂದ ಪ್ರಭಾವಿತರಾಗಿ ಕೆಟ್ಟ ಹಾದಿಯನ್ನು ತುಳಿಯುತ್ತಾರೆ ಮನೆಯಿಂದಲೇ ಮೊದಲು ತಂಬಾಕು ನಿಯಂತ್ರಣವನ್ನು ಮಾಡಬೇಕಾದ ಅನಿವಾರ್ಯತೆ ಇದೆ  ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲವ್ಯಕ್ತಿ ಪುಟ್ಟರಂಗಪ್ಪ ಕಸಬಾ ವಲಯ ಮೇಲ್ವಿಚಾರಕರಾದ ಕುಸುಮ ಅಂಬೇಡ್ಕರ್ ನಗರ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಬೇಬಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Namma Challakere Local News
error: Content is protected !!