ಚಿತ್ರದುರ್ಗ
ನಾಯಕನಹಟ್ಟಿ : ಮಕ್ಕಳು ಚೆನ್ನಾಗಿ ಓದಬೇಕು, ಉತ್ತಮ ಅಂಕಗಳನ್ನು ಪಡೆದು ಶಾಲೆಗೆ, ನಿಮ್ಮ ಗ್ರಾಮಕ್ಕೆ, ಶಿಕ್ಷಕರಿಗೆ, ನಿಮ್ಮ ತಂದೆ-ತಾಯಿಗೆ ಕೀರ್ತಿ ತರಬೇಕು ಎಂದು ಪೀಪಲ್ ಫಾರಮ್ ಆಫ್

ಇಂಡಿಯಾ, ರಾಷ್ಟ್ರೀಯ ಭಾರತ ಸೇವಾ ಸಮಾಜ ರಾಷ್ಟ್ರೀಯ ಉಸ್ತುವಾರಿ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಭಾರ್ಗವ ಮಲ್ಲಪ್ಪ ಮಕ್ಕಳಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಮಯೂರ ಇಂಟರ್ ನ್ಯಾಷನಲ್ ಶಾಲೆಗೆ ಮಂಗಳವಾರ ಬೇಟಿ ನೀಡಿ ಮಾತನಾಡಿದ ಅವರು

ಮಕ್ಕಳು ಓದಿನ ಕಡೆಗೆ ಗಮನ ಹರಿಸಿ ನಿಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಿ ಪ್ರತಿದಿನ ತಪ್ಪದೇ ಶಾಲೆಗೆ ಬರಬೇಕು ಎಂದರು.

ಈ ಶಾಲೆಗೆ 4 ಬಾರಿ ಬಂದಿದ್ದೇನೆ, ಶಾಲೆಯ ಮಕ್ಕಳು ಎಂದರೆ ಅಪಾರವಾದ ಪ್ರೀತಿ

ನಿಮ್ಮನೆಲ್ಲಾ ನೋಡಿ ನನಗೆ ಬಹಳ ಖುಷಿ ಅನಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಭಾರತೀಯ ಹಿಂದು ಪರಿವಾರ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಸೇಲ್ವ ಗಣೇಶ, ಮಯೂರ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಡಾ.ಎಂ.ಮೈಲಾರಸ್ವಾಮಿ, ಶಾಲೆಯ ಶಿಕ್ಷಕರುಗಳು ಇದ್ದರು.

ಪಟ್ಟಣದ ಐತಿಹಾಸಿಕ ಮಾಡಿದಷ್ಟು ನೀಡು ಭಿಕ್ಷೆ ಎಂಬ ವಚನ ನುಡಿದಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಒಳಮಠ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ವಿದ್ಯಾರ್ಥಿಗಳಿಂದ ಹೂವು ಸ್ವೀಕರಿಸಿ ಹಿತ ನುಡಿಗಳನ್ನು ಹೇಳಿದರು.

About The Author

Namma Challakere Local News
error: Content is protected !!