ನ.28ಕ್ಕೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವ.
ವರದಿ: ಕೆ.ಟಿ.ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಆರಾಧ್ಯ ದೈವ ಇಲ್ಲಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವ ನವಂಬರ್ 28ರಂದು ಜರಗಲಿದೆ ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಣಾಧಿಕಾರಿ ಎಚ್ ಗಂಗಾಧರಪ್ಪ ತಿಳಿಸಿದ್ದಾರೆ.
ಸೋಮವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾರ್ತಿಕೋತ್ಸವ ಅಮವಾಸ್ಯೆಯಿಂದ ಪ್ರಾರಂಭವಾಗಿದೆ ಬಂಡೆ ರಂಗನಾಥ ಸ್ವಾಮಿಗೆ ಕಾರ್ತಿಕ ದೀಪ ಹಚ್ಚುವುದರ ಮೂಲಕ ಚಾಲನೆ ನೀಡಲಾಗಿದೆ.
ನವೆಂಬರ್ 21 /11/ 2025 ರಂದು ಸಣ್ಣ ಕಾರ್ತಿಕೋತ್ಸವ.
27 11 2025 ರಂದು ಲಕ್ಷ ದೀಪೋತ್ಸವ ಅದೇ ದಿನ ರಾತ್ರಿ ಬೆಳ್ಳಿ ರಥೋತ್ಸವ ಜರಗಲಿದೆ.
28/11/25ರಂದು ದೊಡ್ಡ ಕಾರ್ತಿಕೋತ್ಸವ ಜರಗಲಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಈಗ ಚಳಿಗಾಲ ಪ್ರಾರಂಭವಾಗಿದೆ ಭಕ್ತರು ಚಳಿಗಾಲದ ಪೂರ್ವ ಸಿದ್ಧತೆಯೊಂದಿಗೆ ಬರಬೇಕು ಎಂದರು

