ಚಳ್ಳಕೆರೆ :ಮೊಳಕಾಲ್ಕೂರು: ಮನೆ ಕಳ್ಳರನ್ನು ಬಂಧಿಸಿದ
ಪೊಲೀಸರು
ಮೊಳಕಾಲ್ಕೂರಿನಲ್ಲಿ ಮೂರು ಮನೆಗಳಲ್ಲಿ ಹಗಲು ಕಳವು ಮಾಡಿದ್ದ
ಇಬ್ಬರು ಆರೋಪಿಗಳಾದ ನಾಗರಾಜ ಮತ್ತು ರಾಜಣ್ಣ ಅವರನ್ನು
ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 40
ಗ್ರಾಂ ತೂಕದ ಚಿನ್ನಾಭರಣ (ಒಂದು ಜೊತೆ ಬಂಗಾರದ ಹ್ಯಾಂಗಿಂಗ್,
20 ಗ್ರಾಂ ನಕ್ಲಸ್, 10 ಗ್ರಾಂ ಮತ್ತು 5 ಗ್ರಾಂ ನ ಕಿವಿಯೋಲೆಗಳು)
ಹಾಗೂ 35,000 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

