ಚಳ್ಳಕೆರೆ : ಚಿತ್ರದುರ್ಗ: ಒಂದೇ ಕುಟುಂಬದ ನಾಲ್ವರು ನಾಪತ್ತೆ
ಚಿತ್ರದುರ್ಗದ ಅಗಸರಹಳ್ಳಿ ಗ್ರಾಮದ ಮಹಮ್ಮದ್ ಫಾರೂಕ್,
ಅವರ ಪತ್ನಿ ಅಪ್ರಿನ್ ತಾಜ್ ಮತ್ತು ಮಕ್ಕಳಾದ ಮಹಮ್ಮದ್ ಅಲಿ,
ಷಹಜೀಯಾ ಅವರು ಜೂನ್ 12 ರಿಂದ ಕಾಣೆಯಾಗಿದ್ದಾರೆ. ಈ
ಸಂಬಂಧ ಜುಲೈ 13 ರಂದು ಕೋಟೆ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

ನಗರದ ಹೊಳಲ್ಕೆರೆ ರಸ್ತೆಯ ಮಂಡಕ್ಕಿ
ಭಟ್ಟಿ ಏರಿಯಾದಲ್ಲಿ ವಾಸವಿದ್ದ ಈ ಕುಟುಂಬದ ಪತ್ತೆಗೆ ಪೊಲೀಸರು
ಶೋಧ ನಡೆಸುತ್ತಿದ್ದಾರೆ. ಗುರುತು ಪತ್ತೆಯಾದಲ್ಲಿ ಕೋಟೆ
ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08194-222933 ಕ್ಕೆ
ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

About The Author

Namma Challakere Local News
error: Content is protected !!