ಚಳ್ಳಕೆರೆ : ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗಿಂತ ದ್ವಿಚಕ್ರ ವಾಹನಗಳ ಸಂಖ್ಯೆಯೇ ಹೆಚ್ಚು.
ಹೌದು ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ ಇರುವಂತಹ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ದ್ವಿಚಕ್ರ ವಾಹನಗಳು ಎಲ್ಲೆಂದರಲ್ಲಿ ಅಡ್ಡ ದಿಡ್ಡಿ ದ್ವಿಚಕ್ರ ನಿಲ್ಲಿಸುವುದರಿಂದ ಆಸ್ಪತ್ರೆಗೆ ಬಂದು ಹೋಗುವ ರೋಗಿಗಳಿಗೆ ತುಂಬಾ ಕಿರಿಕಿರಿಯುಂಟಾಗುತ್ತಿದೆ.
ಇನ್ನೂ ಆಸ್ವತ್ರೆಗೆ ಬರುವ ರೋಗಿಗಳ ಅಲ್ಲದೆ ಇರುವಂತಹ ಪ್ರಯಾಣಿಕರು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸುವುದರಿಂದ ತುರ್ತು ನಿಗಾ ಘಟಕಕ್ಕೆ ಆಗಮಿಸುವಂತಹ ಆಂಬುಲೆನ್ಸ್ ಗೆ ತುಂಬಾ ತೊಂದರೆಯಾಗುತ್ತಿದೆ.
ಅಂಬುಲನ್ಸ್ ಗೆ
ದಾರಿ ಬಿಡದೆ ದ್ವಿಚಕ್ರ ವಾಹನಗಳ ನಿಲ್ಲಿಸುವುದರಿಂದ ತುರ್ತು ಚಿಕಿತ್ಸೆಗೆ ಬರುವಂತಹ ಅಂಬುಲೆನ್ಸ್ ಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ನಗರಸಭೆ ಗಮನಕ್ಕೆ ತಂದರು ಕೂಡ ಎಲ್ಲಿಯೂ ಕೂಡ ದ್ವಿಚಕ್ರ ವಾಹನಗಳ ನಿಲುಗಡೆಗೆ ಕಾಯಂ ನಿಗದಿತ ಸ್ಥಳ ಗುರುತು ಮಾಡದೆ ಇರುವುದರಿಂದ ಆಸ್ಪತ್ರೆಯ ಮುಂಭಾಗದಲ್ಲೇ ಖಾಸಗಿ ಬಸ್ ನಿಲ್ದಾಣದ ಇರುವುದರಿಂದ ದಿನನಿತ್ಯ ಗ್ರಾಮೀಣ ಪ್ರದೇಶಗಳಿಂದ ಬಂದು ಹೋಗುವಂತಹ ಸಾರ್ವಜನಿಕರ ವಾಹನಗಳನ್ನು ಆಸ್ಪತ್ರೆ ಆವರಣವನ್ನು ನಿಲ್ದಾಣ ಸ್ಥಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿ ಕೂಡ ಇದರ ಬಗ್ಗೆ ಗಮನ ಹರಿಸದೆ ಇರುವುದು ಶೋಚನೆಯ ಸಂಗತಿಯಾಗಿದೆ ಎಂದು ಹೇಳಬಹುದು.
ಇನ್ನಾದರೂ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಬರುವ ಅಂಬುಲೆನ್ಸ್ ಗೆ ಆಸ್ಪತ್ರೆಯ ಅವರಣದಲ್ಲಿ ದಾರಿ ಮಾಡಿಕೊಡಬೇಕು, ಅಂಬುಲೆನ್ಸ್ ಸಿಬ್ಬಂದಿಗೆ ಕಿರಿಕಿರಿ ತಪ್ಪಿಸಲು ದ್ವಿಚಕ್ರವನ್ನು ರೋಗಿಗಳ ಸಂಬಂಧಿಸಿದಲ್ಲದೇ ಇರುವಂತಹ ದ್ವಿಚಕ್ರ ವಾಹನಗಳನ್ನು ಬೇರೆಡೆಗೆ ಸಾಗಿಸಲು ಪೊಲೀಸ್ ಇಲಾಖೆ ಕ್ರಮ ವಹಿಸಬೇಕೆಂದು ಸಾರ್ವಜನಿಕರ ಒಕ್ಕೂರು ಹಾಗಿದೆ.


