ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ಯುಪಿಎಸ್, ಟ್ರ್ಯಾಕ್ ಸೂಟ್, ನೊಟೀಸ್ ಬೋರ್ಡ್ ಕೊಡುಗೆ.
ಪರಶುರಾಂಪುರ.
ಕ್ರಿಯಶೀಲ ಚಟುವಟಿಕೆಯಿಂದ ಶಿಕ್ಷಕರು ಶಾಲೆಯನ್ನು ಜೀವಂತವಾಗಿ ಇಡಲು ಸಾಧ್ಯ. ದಾನಿಗಳು ಪೋತ್ಸಾಹದಾಯಕ ಕೊಡುಗೆ ನೀಡಿದರೆ ಮಕ್ಕಳ ಉತ್ತಮ ಕಲಿಕೆಗೆ ನೆರವಾಗುತ್ತದೆ. ಉತ್ತಮ ಬೋಧನೆ ಮೂಲಕ ಮಕ್ಕಳ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಜತೆ ಪೋಷಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್ ಸುರೇಶ್ ಅಭಿಪ್ರಾಯಪಟ್ಟರು.
ಸಮೀಪದ ದೋಡ್ಡಚೆಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ದಾನಿಗಳಿಂದ ವಿವಿಧ ಬಗೆಯ ಕೊಡುಗೆ ವಿತರಣಾ ಹಾಗೂ ಗುರುವಂದನಾ ಕಾಯ೯ಕ್ರಮದಲ್ಲಿ ಮಾತನಾಡಿದರು.
ಪೋಷಕರು, ಶಿಕ್ಷಕರು ಶಾಲೆ ಪ್ರಗತಿ ಕುರಿತು ಕಾಳಜಿ ತೋರಿಸಬೇಕು. ಮಕ್ಕಳಲ್ಲಿರುವ ಕಲಿಕೆಯ ಆಸಕ್ತಿ ಗಮನಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಲಿಕೆಯ ಮಹತ್ವ ತಿಳಿಸಿಕೊಡಬೇಕು ಎಂದರು
ಸರ್ಕಾರದ ಜೊತೆಗೆ ದಾನಿಗಳು ಕೈಜೊಡಿಸಲು ನಮ್ಮ ಶಾಲೆ,ನಮ್ಮ ಜವಾಬ್ದಾರಿ ಎಂಬಂತೆ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ನೆರವು ನೀಡಿದರೆ ಆಧುನಿಕ ಸೌಲಭ್ಯ ಅಳವಡಿಸಿಕೊಳ್ಳಬಹುದು ಎಂದು ಹಳೆ ವಿದ್ಯಾರ್ಥಿಯಾದ ಪ್ಯಾಭ್ರಿಕೇಷನ್ ರಾಮಾಂಜನೇಯ ತಿಳಿಸಿದರು.
ಇಲಾಖೆ ಜತೆ ಗ್ರಾಪಂ ಒಳಗೊಂಡಂತೆ ದಾನಿಗಳು ಯುಪಿಎಸ್, ಟ್ರ್ಯಾಕ್ ಸೂಟ್, ನೊಟೀಸ್ ಬೋರ್ಡ್ ಸೇರಿದಂತೆ ಅನೇಕ ಸಾಮಗ್ರಿಗಳನ್ನು ದಾನಿಗಳು ಉದಾರವಾಗಿ ಶಾಲೆಗೆ ನೀಡಿ ಶೈಕ್ಷಣಿಕ ಪ್ರಗತಿಗೆ ನೆರವಾಗಿದ್ದಾರೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ಮುಖ್ಯ ಶಿಕ್ಷಕ ಹನುಮಂತರಾಯಪ್ಪ ತಿಳಿಸಿದರು.
ದಾನಿಗಳು, ವರ್ಗಾವಣೆಗೊಂಡ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಅಧಿಕಾರಿಗಳನ್ನ ಸನ್ಮಾನಿಸಲಾಯಿತು.ರಾಮಾಂಜನೇಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸ್ಯೂಟ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಸದಸ್ಯ ಅನಿಲ್ ಕುಮಾರ್ ಶಾಲೆಗೆ ಯುಪಿಎಸ್,ಗ್ರಾಪಂ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಶಾಲೆಯಲ್ಲಿ ನೊಟೀಸ್ ಬೋರ್ಡ್ ಕೊಡುಗೆ ನೀಡಿದ್ದಾರೆ.
ಗ್ರಾಮೀಣ ಭಾಗದ ಶಾಲೆಗಳನ್ನ ಉಳಿಸಿ ಬೆಳೆಸುವಲ್ಲಿ ದಾನಿಗಳ,ವಿದ್ಯಾಭಿಮಾನಿಗಳ,ಸಂಘ-ಸಂಸ್ಥೆಗಳ,ಹಳೆ ವಿದ್ಯಾರ್ಥಿಗಳ ಕೊಡುಗೆ ಅತ್ಯಂತ ಮಹತ್ವವಾದದ್ದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಸದಸ್ಯ ಅನಿಲ್ ಕುಮಾರ್ ತಿಳಿಸಿದರು.
ಈ ವೇಳೆಯಲ್ಲಿ ಗ್ರಾಪಂ ಅಧ್ಯಕ್ಷ ಪಟೇಲ್ ರಾಘವೇಂದ್ರ, ಎಸ್ಡಿಎಂಸಿ ಅಧ್ಯಕ್ಷ ವಿಜಯಕುಮಾರ್,ಬಿಇಓ ಸುರೇಶ್,ಇಸಿಓ ರವಿಶಂಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಅನಿಲ್ ಕುಮಾರ್, ರಾಮಾಂಜನೇಯ,ಪ್ರಸನ್ನ ಕುಮಾರ್, ರಾಘವೇಂದ್ರ, ಶಿವಸ್ವಾಮಿ,ಭಾಗ್ಯಮ್ಮ,ಗೋವಿಂದರಾಜು, ಕರಿಯಣ್ಣ ಸೇರಿದಂತೆ ಹಳೆ ವಿದ್ಯಾರ್ಥಿಗಳ ಜೊತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಾಕ್ಸ್
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಕೊಡುಗೆ ನೀಡಲು ಕೆಲವು ಮಾರ್ಗಗಳು:
ಹಣಕಾಸಿನ ನೆರವು:ಶಾಲೆಗೆ ಅಗತ್ಯವಿರುವ ಹಣವನ್ನು ನೀಡುವುದು. ಇದು ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ, ಶೈಕ್ಷಣಿಕ ಚಟುವಟಿಕೆಗಳಿಗೆ ಅಥವಾ ಶಾಲಾ ಸಾಮಗ್ರಿಗಳ ಖರೀದಿಗಾಗಿ ಬಳಸಬಹುದು.
ಶಾಲಾ ಸಾಮಗ್ರಿಗಳು:ಪುಸ್ತಕಗಳು, ನೋಟ್‌ಬುಕ್‌ಗಳು, ಪೆನ್ನುಗಳು, ಪೆನ್ಸಿಲ್‌ಗಳು, ಮತ್ತು ಇತರ ಬೋಧನಾ ಸಾಮಗ್ರಿಗಳನ್ನು ದಾನ ಮಾಡಬಹುದು.
ಕಂಪ್ಯೂಟರ್‌ಗಳು ಮತ್ತು ಇತರ ಉಪಕರಣಗಳು:ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಪ್ರೊಜೆಕ್ಟರ್‌ಗಳು, ಅಥವಾ ಇತರ ಶೈಕ್ಷಣಿಕ ಉಪಕರಣಗಳನ್ನು ದಾನ ಮಾಡಬಹುದು.
ಕೌಶಲ್ಯಗಳ ಹಂಚಿಕೆ:ತಮಗೆ ತಿಳಿದಿರುವ ಕೌಶಲ್ಯಗಳನ್ನು ಶಾಲೆಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು, ಉದಾಹರಣೆಗೆ, ಸಂಗೀತ, ಕ್ರೀಡೆಗಳು, ಅಥವಾ ಕಂಪ್ಯೂಟರ್ ಕೌಶಲ್ಯಗಳು.
ಸಲಹೆ ಮತ್ತು ಮಾರ್ಗದರ್ಶನ:ಶಿಕ್ಷಕರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಬಹುದು, ಅಥವಾ ಶಾಲೆಯ ಅಭಿವೃದ್ಧಿ ಸಮಿತಿಯೊಂದಿಗೆ ಕೆಲಸ ಮಾಡಬಹುದು.
ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು:ಶಾಲೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬಹುದು.
ನಿಮ್ಮ ಹತ್ತಿರದ ಸರ್ಕಾರಿ ಶಾಲೆಯನ್ನು ಸಂಪರ್ಕಿಸಿ, ಅಲ್ಲಿ ಯಾವ ರೀತಿಯ ಸಹಾಯ ಬೇಕು ಎಂದು ತಿಳಿದುಕೊಂಡು,ನಿಮ್ಮ ಕೊಡುಗೆಯನ್ನು ನೀಡಬಹುದು.ನಿಮ್ಮ ಸಹಾಯವು ಶಾಲೆಯ ಅಭಿವೃದ್ಧಿಗೆ ಬಹಳ ಮುಖ್ಯವಾಗಿರುತ್ತದೆ.

