ಚಳ್ಳಕೆರೆ :

ನಗರದ
ಸ್ಥಳೀಯ ನೃತ್ಯ ನಿಕೇತನ ಸಾಂಸ್ಕೃತಿಕ ಶಿಕ್ಷಣ ಕೇಂದ್ರದ 40ನೆಯ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ ಚಳ್ಳಕೆರೆ ಹಬ್ಬ 2026 ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ವಿಜ್ರಂಬಣೆಯಿಂದ ನೆರವೇರಿತು.

ನಗರದ ಕೈಗಾರಿಕೋದ್ಯಮಿ ಶಿಮುಲ್ ನಿರ್ದೇಶಕ ಬಿಸಿ ಸಂಜೀವ ಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾದ ಗದ್ದಿಗೆ ತಿಪ್ಪೇಸ್ವಾಮಿ, ಕೆನರಾ ಬ್ಯಾಂಕ್ ತ್ಯಾಗ ರಾಜನಗರದ ಪ್ರಬಂಧಕರಾದ ವರಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕ್ ಅಧ್ಯಕ್ಷರಾದ ಜಿ ಟಿ ವೀರಭದ್ರ ಸ್ವಾಮಿ, ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಖ್ಯಾತ ವಾಸ್ತು ವಿದ್ಯಾ ಪ್ರವೀಣ ಶೈಲಾ ಪುರದ ವಾಸ್ತುರಾಮಣ್ಣನವರಿಗೆ ಸದ್ವಿದ್ಯಾ ಸಂಜೀವಿನಿ ಎಂಬ ಪ್ರಶಸ್ತಿಯನ್ನು ಗೌರವಿಸಲಾಯಿತು, ಮತ್ತು ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಗೋಸಿಕೆರೆ ಮುದ್ದು ರಾಜು ಅವರಿಗೆ ಸಮಾಜ ಸೇವ ರತ್ನ ಪ್ರಶಸ್ತಿಯನ್ನು ಸನ್ಮಾನಿಸಲಾಯಿತು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಬಿಕೆ ಪ್ರೇಕ್ಷ ಎಚ್ ಎಂ ಹಂಸವೇಣಿ ಟಿ ವಂದನ ಮತ್ತು ರಚನಾ ಎ ಇವರಿಗೆ ನಾಟ್ಯಕಲರತ್ನ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸಾವಿರಾರು ಜನ ಪ್ರೇಕ್ಷಕರು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದರು ನೂರಾರು ಜನ ನೃತ್ಯ ವಿದ್ಯಾರ್ಥಿನಿಯರು ವಿವಿಧ ಶೈಲಿಯ ನೃತ್ಯಗಳನ್ನು ಪ್ರದರ್ಶಿಸಿದರು

About The Author

Namma Challakere Local News
error: Content is protected !!