ಚಳ್ಳಕೆರೆ :
ಗೌರಸಮುದ್ರ ಜಾತ್ರೆಗೆ ದಿನಗಣನೆ: ದೇವಿ ದರ್ಶನಕ್ಕೆ
ಅವಕಾಶ ಆರಂಭ
ಚಳ್ಳಕೆರೆಯ ಗಡಿಭಾಗದಲ್ಲಿ ನಡೆಯುವ ಗೌರಸಮುದ್ರ ಜಾತ್ರೆಗೆ
ದಿನಗಣನೆ ಆರಂಭವಾಗಿದೆ. ಜಾತ್ರೆಯ ಸಾರು ಹಾಕಿದಾಗಿನಿಂದ
ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಅವಕಾಶವಿರಲಿಲ್ಲ. ಇದೀಗ
ದೇವಿಯ ದರ್ಶನ ಪುನರಾರಂಭಗೊಂಡಿದೆ. ಮನೆಯಲ್ಲಿ ಹೆಂಚು
ಬಳಸಿ ಅಡುಗೆ ಮಾಡಲಾಗುತ್ತದೆ. ಜಾತ್ರೆ ಇದೇ 26ರಂದು
ನಡೆಯಲಿದ್ದು, ಆಂಧ್ರ ಮತ್ತು ಕರ್ನಾಟಕದಿಂದ ಲಕ್ಷಾಂತರ ಭಕ್ತರು
ಆಗಮಿಸುವ ನಿರೀಕ್ಷೆಯಿದೆ.

