ಮಕ್ಕಳು ವಿಜ್ಞಾನಿಗಳ ಸಾಧನೆ ಅರಿಯಲು ಕುತೂಹಲ ಬೆಳೆಸಿಕೊಳ್ಳಿ

ಚಳ್ಳಕೆರೆ: ವಿಜ್ಞಾನ ಎಂಬುದು ಮನುಷ್ಯನ ಕುತೂಹಲಕ್ಕೆ ಉತ್ತರ ನೀಡುವ ಬಹುದೊಡ್ಡ ಜ್ಞಾನವಾಗಿದ್ದು, ಪ್ರಕೃತಿಯ ವಿಸ್ಮಯಗಳನ್ನು ಅರ್ಥೈಸುವಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಎಂದು ಇಸ್ರೋ ಬೆಂಗಳೂರಿನ ಹಿರಿಯ ವಿಜ್ಞಾನಿ ಆನಂದ್ ಹೆಚ್.ಡಿ.
ಹೇಳಿದರು.

ನಗರದ ಹೊಂಗಿರಣ ಎಜುಕೇಷನಲ್ ಟ್ರಸ್ಟ್‌ ಸಹಯೋಗದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಭಾನುವಾರ ಹೊಂಗಿರಣ ಶಾಲಾ ಆವರಣದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು,
ಖಗೋಳ ವಿಜ್ಞಾನ, ಬಾಹ್ಯಾಕಾಶ ಸಂಶೋಧನೆ ಹಾಗೂ ಸೂರ್ಯಗ್ರಹಣ ಸೇರಿದಂತೆ ಖಗೋಳ ವಿದ್ಯಮಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಶ್ನಿಸುವ ಮನೋಭಾವ ಮತ್ತು ಕುತೂಹಲ ಅತ್ಯಗತ್ಯ ಶಾಲಾ ದಿನಗಳಲ್ಲಿ ಮಕ್ಕಳು ಖಗೋಳ, ವಿಜ್ಞಾನ ದಂತಹ ಮಾಹಿತಿಯನ್ನು ವಿದ್ಯಾರ್ಥಿದೆಸೆಯಿಂದ ಅಳವಡಿಸಿಕೊಳ್ಳಬೇಕು
ಎಂದು ಅವರು ತಿಳಿಸಿದರು.

ಕ್ಷೇತ್ರ‌ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ,
ವಿಜ್ಞಾನಿಗಳು ‘ನಡೆದಾಡುವ ಖಗೋಳಶಾಸ್ತ್ರದ ಗ್ರಂಥಗಳಿದ್ದಂತೆ’ ಅವರನ್ನು ನಾವು ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುಬಾಬು ಹೆಚ್.ಪಿ. ಅವರು, ಇಸ್ರೋ ದೇಶದ ಜ್ಞಾನ ಮತ್ತು ವಿಜ್ಞಾನ ಕ್ಷೇತ್ರದ ಹೆಮ್ಮೆಯ ಸಂಸ್ಥೆಯಾಗಿದ್ದು, ವಿಜ್ಞಾನಿಗಳ ಸಾಧನೆಗಳು ಯುವಜನರಲ್ಲಿ ಹೊಸ ಚಿಂತನೆ ಮೂಡಿಸುತ್ತವೆ ಎಂದರು.

ಇನ್ನೂ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಂಗಿರಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ್‌ಗುಪ್ತ ಹೆಚ್.ಎಸ್. ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಕೆ.ಎಸ್ , ಸಂಸ್ಥೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ,
ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ಚಳ್ಳಕೆರೆ ಯರಿಸ್ವಾಮಿ, ಕಾರ್ಯದರ್ಶಿ ಹೆಚ್.ಎಸ್.ಐ. ಸ್ವಾಮಿ,ಕಾರ್ಯದರ್ಶಿ ದಯಾನಂದ ಪ್ರಹ್ಲಾದ್, ಉಪಾಧ್ಯಕ್ಷ ಮಧುಸೂದನ್, ನಿರ್ದೇಶಕ ಶಿವುಪ್ರಸಾದ್, ಶಿಕ್ಷಕರಾದ ಪ್ರಸಾದ್, ಶೈಲಜಾ, ಸಹ ಶಿಕ್ಷಕರು, ಹಾಗೂ ಮಕ್ಕಳು ಪೋಷಕರು ಇತರರು ಪಾಲ್ಗೊಂಡಿದ್ದರು.

ಪೋಟೋ : ಚಳ್ಳಕೆರೆ ನಗರದ ಹೊಂಗಿರಣ ಎಜುಕೇಷನಲ್ ಟ್ರಸ್ಟ್‌ ಸಹಯೋಗದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ವಿಶೇಷ ಉಪನ್ಯಾಸವನ್ನು ಇಸ್ರೊ ಹಿರಿಯ ವಿಜ್ಞಾನಿ ಹೆಚ್‌ಡಿ.ಆನಂದ್ ಮಾತನಾಡಿದರು.

About The Author

Namma Challakere Local News
error: Content is protected !!