ಚಳ್ಳಕೆರೆ :
ಮೊಳಕಾಲ್ಕೂರು: ರಂಗಯ್ಯನ ದುರ್ಗ ಜಲಾಶಯದಿಂದ
ನೀರು ಹೊರಗೆ
ಮೊಳಕಾಲೂರು ತಾಲೂಕಿನ ಜೀವನಾಡಿ ಅಂಗಯ್ಯನ ದುರ್ಗ
ಜಲಾಶಯವು ಅರ್ಧ ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ 33
ಅಡಿ ಎತ್ತರದಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ.
ಕಳೆದ ಒಂದು
ವಾರದಿಂದ 32.5 ಅಡಿ ನೀರು ಸಂಗ್ರಹವಾಗಿದ್ದು, ಇದೀಗ ಹೆಚ್ಚುವರಿ
ನೀರನ್ನು ಗೇಟ್‌ಗಳ ಮೂಲಕ ಹೊರಬಿಡಲಾಗುತ್ತಿದೆ. ಜಲಾಶಯದ
ಹಿಂಭಾಗದ ಜಗಳೂರು ಮತ್ತು ಕೂಡ್ಲಿಗಿ ಭಾಗದಲ್ಲಿ ಸುರಿದ
ಮಳೆಯಿಂದಾಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು
ಬರುತ್ತಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ
ಕ್ಷಣದಲ್ಲಾದರೂ ನೀರು ಹೊರಬಿಡುವ ಬಗ್ಗೆ ಮುನ್ನೆಚ್ಚರಿಕೆ
ನೀಡಿದ್ದರು.

