ಚಳ್ಳಕೆರೆ :

ಮೊಳಕಾಲ್ಮೂರು ತಾಲ್ಲೂಕು ತುಮಕೂರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಒಕ್ಕೂಟದ ವತಿಯಿಂದ ಮಿಶ್ರತಳಿ ಹಸು ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಶಿಬಿರ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಬಿಎಂಸಿ ಕೇಂದ್ರದ ಆವರಣದಲ್ಲಿ ಪೂಜ್ಯಶ್ರೀ ಬಸವಲಿಂಗ ಮಹಾಸ್ವಾಮಿಗಳು ಚಿತ್ತರಗಿ ಮಠ ಸಿದ್ದಯ್ಯನಕೋಟೆ ಇವರ ದಿವ್ಯ ಸಾನಿಧ್ಯದಲ್ಲಿ ಟಿ. ಜಿ. ಮಂಜುನಾಥ್. ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರ ಸಂಘ ತುಮಕೂರ್ಲಹಳ್ಳಿ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಿ.ಸಿ. ಸಂಜೀವ ಮೂರ್ತಿ. ನಿರ್ದೇಶಕರು ಶಿಮುಲ್.ರವರು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಂಘಗಳಾದ ಕೊಂಡ್ಲಹಳ್ಳಿ ಬಿ.ಜಿ.ಕೆರೆ ಕೋನಸಾಗರ ಉಡೆಮ್ ಸಂಘಗಳಿಗೆ ನಿರ್ದೇಶಕರು ಭೇಟಿಕೊಟ್ಟು ಅಲ್ಲಿಯ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.

About The Author

Namma Challakere Local News
error: Content is protected !!