ಚಳ್ಳಕೆರೆ :
ಚಿತ್ರದುರ್ಗ: ಎಟಿಎಂ ಯಂತ್ರ ಹಾರೆಯಿಂದ ಮೀಟಿ ಹಣ
ದೋಚಿದ ಕಳ್ಳ
ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕೆನರಾ
ಬ್ಯಾಂಕ್ ಎಟಿಎಂ ಯಂತ್ರವನ್ನು ಹಾರೆಯಿಂದ ಮೀಟಿ ಹಣ
ದೋಚಿರುವ ಘಟನೆ ಇಂದು ಬೆಳಗಿನ ಜಾವದಲ್ಲಿ ನಡೆದಿದೆ.
ಮುಸುಕು ಧರಿಸಿದ ಕಳ್ಳನೊಬ್ಬ ಈ ಕೃತ್ಯ ಎಸಗಿದ್ದಾನೆ. ಸ್ಥಳಕ್ಕೆ
ಭೇಟಿ ನೀಡಿದ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ,
ಪ್ರಕರಣ ದಾಖಲಿಸಿಕೊಂಡು ಕಳ್ಳನ ಶೋಧ ಕಾರ್ಯವನ್ನು
ಮುಂದುವರಿಸಿದ್ದಾರೆ.

