ಚಳ್ಳಕೆರೆ :
ಚಳ್ಳಕೆರೆ ತಾಲ್ಲೂಕಿನ ದುರ್ಗಾವಾರ ಗ್ರಾಮದ ರಂಗನಾಥನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯು ರಾಜ್ಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣನವರ ನೇತೃತ್ವದಲ್ಲಿ ನೂತನ
ರೈತ ಸಂಘದ ಗ್ರಾಮ ಶಾಖೆ ಉದ್ಘಾಟಿಸಲಾಯಿತು.
ರೈತ ಕಾರ್ಮಿಕರು, ರೈತ ಮಹಿಳೆಯರನ್ನ ಒಳಗೊಂಡಂತೆ ದುರ್ಗಾವಾರ ಗ್ರಾಮದಲ್ಲಿ ಸಭೆ ಸೇರಿ ಗ್ರಾಮ ಘಟಕವನ್ನು ಸ್ಥಾಪಿಸಿ ಎಲ್ಲರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಯಿತು.
ನಂತರ ಸಂಘದ ಕಾರ್ಯ ಸೂಚಿಗಳನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು

