ಚಳ್ಳಕೆರೆ : ಬೆಳಕಿನ ಹಬ್ಬ ,ದೀಪಾವಳಿ ಹಬ್ಬ ಎಲ್ಲಾರ ಬಾಳಲ್ಲಿ ಬೆಳಕು ತರಲಿ ಎಂದು ಶಿಮುಲ್ ನಿರ್ದೇಶಕ ಬಿಸಿ ಸಂಜೀವ್ ಮೂರ್ತಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ಇನ್ನೂ ನಗರದ ನಂದಿನ ವಲಯ ಕೇಂದ್ರ ಕಛೇರಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ ಲಾಂಭಂಶದಲ್ಲಿ ಹೈನುಗಾರಿಕೆಗೆ ಉತ್ತೆಜನ ನೀಡುವ ಮೂಲಕ ಮುಂಚೂಣಿಯಲ್ಲಿದೆ,
ಬಯಲು ಸೀಮೆಯಾದ ಚಳ್ಳಕೆರೆ ಪ್ರದೇಶದಲ್ಲಿ ಹಾಲು ಉತ್ಪಾದಕರ ಸಂಖ್ಯೆ ಹೆಚ್ಚಳವಾಗಿದೆ, ರೈತರಿಗೆ ಶಿಮುಲ್ ನಿಂದ ಉತ್ತೇಜನ ನೀಡುವ ಮೂಲಕ ನೂತನ ಸಂಘಗಳನ್ನು ಸ್ಥಾಪನೆ ಮಾಡಿ ಹೈನುಗಾರಿಕೆಯ ಸಂಖ್ಯೆಯಲ್ಲಿ ಹೆಚ್ಚು ಲಾಭ ಪಡೆಯುವುದು ಹೇಗೆ ಎಂಬುದನ್ನು ಹಾಲು ಉತ್ಪಾದಕರ ಉತ್ತೇಜನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಶಿವಮೊಗ್ಗದ ಹಾಲಿನ ಡೈರಿಯ ಮಾದರಿಯಲ್ಲಿ
ಚಿತ್ರದುರ್ಗ ಹಾಗೂ ದಾವಣಗೆರೆ ವಿಭಾಗದಿಂದ ಹೆಡ್ ಬ್ರಾಂಚ್ ನಿರ್ಮಿಸಲಾಗುತ್ತದೆ, ಇದರಿಂದ ಸುತ್ತಲಿನ ಎರಡು ಜಿಲ್ಲೆಯ ರೈತರಿಗೆ ವರದಾನವಾಗಲಿದೆ, ಎಂದರು.

