ನಾಯಕನಹಟ್ಟಿ ಉರಿ ಬಿಸಿಲಲ್ಲಿ ಕೆಲಸ ಮಾಡುವ ನರೇಗಾ ಕೂಲಿ ಕಾರ್ಮಿಕರಿಗೆ ತಮ್ಮ ಜಮೀನಿನಲ್ಲಿ ಬೆಳೆದ ಪಪ್ಪಾಯಿ ಹಣ್ಣು ವಿತರಣೆ ಮಾಡಲಾಗಿದೆ ಎಂದು. ಅಬ್ಬೇನಹಳ್ಳಿ ಯುವ ಮುಖಂಡ ಎ.ಪಿ. ರೇವಣ್ಣ ಹೇಳಿದ್ದರು.

ಮಂಗಳವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಪಪ್ಪಾಯಣ್ ವಿತರಣೆ ಮಾಡಿ ಮಾತನಾಡಿದರು. ನಮ್ಮ ಗ್ರಾಮದಲ್ಲಿ ಗೋಕಟ್ಟೆ ಮತ್ತು ಜಿನಗಿ ಹಳ್ಳದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉರಿ ಬಿಸಿಲಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಉಪಾಯ ಹಣ್ಣು ತಿಂದು ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಪಪ್ಪಾಯಿ ಹಣ್ಣು ವಿತರಣೆ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪಡ್ಲಬೋರಣ್ಣ, ಟಿ. ಶೇಖರ್ ಗೌಡ, ಗ್ರಾಮಸ್ಥರಾದ ಬಿ. ಎಸ್. ನಿರಂಜನ್ ಗೌಡ, ಯತೀಶ್, ಗೋವಿಂದಪ್ಪ,ಟಿ. ನಾಗರಾಜ್, ಏಕಾಂತಪ್ಪ, ಮಂಜುನಾಥ್, ಬಿ. ಕೃಷ್ಣಪ್ಪ, ನರೇಗಾ ಕೂಲಿ ಕಾರ್ಮಿಕರು ಇದ್ದರು.

About The Author

Namma Challakere Local News
error: Content is protected !!