ಚಳ್ಳಕೆರೆ :
ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮನವಿ..
ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಅಂಗಡಿಗಳಲ್ಲಿ ಅಕ್ರ.ವಾಗಿ ಮದ್ಯ ಮಾರಾಟವನ್ನು ಮಾಡುತ್ತಿದ್ದು ಇದರಿಂದ ಗ್ರಾಮದ ಮಹಿಳೆಯರು ಹಾಗೂ ನಿವಾಸಿಗಳು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿಯ ದೊಡ್ಡ ಬೀರನಹಳ್ಳಿ ಮಜರೇ ಗ್ರಾಮದ ಸಿರಾದರ ಕಪ್ಪಲೆ ಹಾಗೂ ಕುಮಾರಿ ಕಪ್ಪಲೆ ಮತ್ತು ಹನ್ನೊಯ್ಯನ ರೊಪ್ಪದ ಮಹಿಳೆಯರು ಇಂದು ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ…
ಈ ಸಮಯದಲ್ಲಿ ಸಿರದರಕಪಿಲೆ ಗ್ರಾಮದ ಮಹಿಳೆ ಸುನಿತ ಮಾತನಾಡಿ, ನಾವು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಈ ಗ್ರಾಮದಲ್ಲಿ ಇರುವ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ಇಲ್ಲಿನ ಗಂಡಸರು ಕುಡಿತಕ್ಕೆ ಬಿದ್ದು ಹಣದ ಜತೆಗೆ ಆರೋಗ್ಯ ವನ್ನು ಕಳೆದುಕೊಳ್ಳುತ್ತಿದ್ದಾರೆ.
ನಾವು ದುಡಿದ ಹಣವನ್ನ ನಮಗೆ ಸಿಗದಂತೆ ಮಾಡಿ ಹಣ ಕಸಿದುಕೊಂಡು ಹೋಗಿ ಮದ್ಯವನ್ನ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದು ಇದರಿಂದ ಗ್ರಾಮೀಣ ಭಾಗದಲ್ಲಿದ್ದರೂ ನೆಮ್ಮದಿ ಜೀವ ಸಾಗಿಸುವುದ ಕಷ್ಟಕರವಾಗಿದೆ ಆದುದರಿಂದ ನಮ್ಮ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನ ನಿಲ್ಲಿಸಿಬೇಕು ಎಂದು ಮನವಿ ಮಾಡಿದರು..
ಮನವಿ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರರ ರೇಹನ್ ಪಾಷ್ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು…

