ಚಳ್ಳಕೆರೆ :

ಗೋಪನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕೆ. ಭವಾನಿ ಉಮೇಶ್ ಅವಿರೋಧವಾಗಿ ಆಯ್ಕೆ .

ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ತೆರವಾದ ಕಾರಣದಿಂದಾಗಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕೆ. ಭವಾನಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

17 ಜನರ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿ 13 ಸದಸ್ಯರು ಒಳಗೋಡ ಕೆ.ಭವಾನಿ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹರಿಪ್ರಸಾದ್ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದು, ಕೆ.ಭವಾನಿ ಇವರನ್ನ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಕೆ ಭವಾನಿ ಮಾತನಾಡಿ. ಸರ್ವಾನುಮತದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಈ ಮೂಲಕ ಅಭಿನಂದನೆ ತಿಳಿಸುತ್ತೇನೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೆನೆ, ಮುಖ್ಯವಾಗಿ ಮೂಲ ಸೌಕರ್ಯಗಳಾದ ನೀರು, ಚರಂಡಿ , ಹಾಗೂ ರಸ್ತೆ ಇವುಗಳಿಗೆ ಆದ್ಯತೆ ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಲಕ್ಷ್ಮಮ್ಮ, ಉಪಾಧ್ಯಕ್ಷರಾದ ರಾಧಮ್ಮ ,
ಸದಸ್ಯರಾದ ಶಿವಣ್ಣ, ರಂಗೇಗೌಡರು, ಬೋರಯ್ಯ, . ಕಲಾವತಿ ,ಸುಮಿತ್ರ, ಟಿ.ನಾಗರಾಜ್, ಗೀತಾ ಲಕ್ಷ್ಮಿ, ಇದ್ದರು.

ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಭವಾನಿ ಇವರಿಗೆ ಪಿಡಿಓ ಎನ್ ಆರ್. ತಿಪ್ಪೇಸ್ವಾಮಿ ಕಾರ್ಯದರ್ಶಿ ಎಸ್ ಆರ್. ಕರಿಯಪ್ಪ ಹಾಗೂ ಗ್ರಾಮಪಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

About The Author

Namma Challakere Local News
error: Content is protected !!