ಚಿತ್ರದುರ್ಗ: ಆಸ್ತಿ ಪಾಲಿಗಾಗಿ ಮಹಿಳೆಯರ ಬೀದಿ
ಕಾಳಗ
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಆಸ್ತಿ
ಪಾಲುದಾರಿಕೆ ವಿಚಾರವಾಗಿ ಒಂದೇ ಕುಟುಂಬದ ಮಹಿಳೆಯರು
ರಸ್ತೆಯಲ್ಲೇ ಜಗಳವಾಡಿಕೊಂಡ ಘಟನೆ ನಡೆದಿದೆ. ಚಿತ್ರದುರ್ಗ
ತಾಲೂಕಿನ ಆಯಿತೋಳು ಗ್ರಾಮದ ಕುಟುಂಬ ಸದಸ್ಯರು ಎಸಿ
ಕೋರ್ಟ್ನಲ್ಲಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ನ್ಯಾಯ
ಸಿಗದಿದ್ದಾಗ ಎಡಿಸಿ ಕೋರ್ಟ್ಗೆ ಅರ್ಜಿ ಹಾಕಿದ್ದರು. ಈ ಅರ್ಜಿಗಳ
ವಿಚಾರಣೆ ನಡೆಯುತ್ತಿದ್ದಾಗಲೇ, ಕುಟುಂಬದ ಮಹಿಳೆಯರು
ಬೀದಿಯಲ್ಲಿಯೇ ಜಗಳವಾಡಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

