“ಭಕ್ತರ ಸೇವಾ ಮನೋಭಾವ ಶ್ಲಾಘನೀಯ”:-ಡಾ.ಭೂಮಿಕ. ಚಳ್ಳಕೆರೆ:-ಶ್ರೀರಾಮಕೃಷ್ಣರ ಗಂಟಲು ಕ್ಯಾನ್ಸರ್ ನಿವಾರಣೆಯಾಗಲು ಭಕ್ತರು ಮಾಡುತ್ತಿದ್ದ ಸೇವೆ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕಿ ಡಾ.ಭೂಮಿಕಾ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಯುಗಾವತಾರ ಶ್ರೀರಾಮಕೃಷ್ಣ ಭಾಗ-೨ರ ಗ್ರಂಥ ಪಾರಾಯಣ ಮಾಡುತ್ತ “ಅಂತ್ಯದ ಆರಂಭ” ಎಂಬ ಅಧ್ಯಾಯವನ್ನು ವಾಚಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ಸುಧಾಮಣಿ, ವೆಂಕಟಲಕ್ಷ್ಮೀ, ಜಿ.ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಚೆನ್ನಕೇಶವ, ಸಂತೋಷ್ ಉಪಸ್ಥಿತರಿದ್ದರು.

