ತಾಲ್ಲೂಕು ಮಡಿವಾಳ ಮಹಿಳಾ ಸಂಘದ ಅಧ್ಯಕ್ಷರಾಗಿ ಎಸ್.ಶೈಲಜಾ ಆಯ್ಕೆ.

ಚಳ್ಳಕೆರೆ-28 ತಾಲೂಕು ಮಡಿವಾಳ ಮಹಿಳಾ ಸಂಘವನ್ನು ಪ್ರಾರಂಭಿಸಲಾಗಿದೆ ಎಂದು ತಾಲೂಕು ಮಡಿವಾಳ ಸಂಘದ ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಎನ್.ಮಂಜುನಾಥ ತಿಳಿಸಿದರು.
ಅವರು, ಪತ್ರಿಕೆಗೆ ಮಾಹಿತಿ ನೀಡಿ, ಮಹಿಳಾ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಮುದಾಯದ 25 ಮಹಿಳೆಯರನ್ನು ಸಂಘಟನೆ ಮಾಡಿ ಮಹಿಳಾ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ.
ಗೌರವಾಧ್ಯಕ್ಷರಾಗಿ ಅನುಸೂಯಮ್ಮ, ಅಧ್ಯಕ್ಷರಾಗಿ ನಗರಂಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಸ್.ಶೈಲಜಾ, ಉಪಾಧ್ಯಕ್ಷರಾಗಿ ಗೀತಾ, ಕಾರ್ಯದರ್ಶಿಯಾಗಿ ಟಿ ಮಂಜುಳಾ, ಖಜಾಂಚಿಯಾಗಿ ವೈ. ರೇಣುಕಮ್ಮ, ಸಂಘಟನಾ ಕಾರ್ಯದರ್ಶಿಯಾಗಿ ಮಂಜಮ್ಮ, ಸದಸ್ಯರಾಗಿ ಕೆ ವಿಜಯಲಕ್ಷ್ಮಿ, ಗಂಗಮ್ಮ, ಎಸ್. ಜಯಲಕ್ಷ್ಮಿ, ಶಿವಗಂಗಮ್ಮ, ಜಿ.ಎಸ್. ಮಂಜುಳಾ, ಎನ್.ರೇಣುಕಾ, ವಿ. ಇಂದು, ಜಿ.ದೀಪ, ಕೆ.ಆರ್. ರೇಣುಕಾ, ಲಕ್ಷ್ಮೀದೇವಿ, ಪಿ. ರೇಣುಕಾ, ರಾಜೇಶ್ವರಿ, ರತ್ನಮ್ಮ, ಪಿ.ಪ್ರೇಮ, ಎ.ಸಣ್ಣಮ್ಮ ವಿಜಯಮ್ಮ, ಎಂ.ಕವಿತಾ, ಡಿ.ಶಾರದ ಇವರನ್ನು ಮಹಿಳಾ ಸಂಘಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಎಸ್.ಶೈಲಜಾ ಮಾತನಾಡಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರು ಮಡಿವಾಳ ಸಮಾಜವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಮಹಿಳಾ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಸಹ ಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಡಿವಾಳ ಸಮಾಜಕ್ಕೆ ಮತ್ತಷ್ಟು ಶಕ್ತಿ ತುಂಬುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

About The Author

Namma Challakere Local News
error: Content is protected !!