ಚಿತ್ರದುರ್ಗ : ನಗರದ ಚಂದ್ರವಳ್ಳಿಯಲ್ಲಿ ಭಾನುವಾರ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಮಹಾತ್ಮ ಗಾಂಧೀಜಿಯವರ ಜಯಂತಿ ಅಂಗವಾಗಿ ಏಕ್ ತಾರೀಖ್ ಏಕ್ ಘಂಟ ಏಕ್ ಸಾಥ್ ಸ್ವಚ್ಛತೆಗಾಗಿ ಶ್ರಮದಾನ ಅಭಿಯಾನವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭವನ್ನುದ್ದೇಶಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಹೆಚ್.ಎಸ್. ಪಂಚಾಕ್ಷರಿ ಅವರು, ಮಹಾತ್ಮಗಾಂಧಿಯವರ ಆದರ್ಶ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದರೊಂದಿಗೆ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕೆಂದು ಕರೆ ನೀಡಿದರು.
ಕಾಲೇಜಿನ ಎನ್‌ಎಸ್‌ಎಸ್ ಘಟಕ 1 ಮತ್ತು 2, ಎನ್‌ಸಿಸಿ ಸ್ವಯಂ ಸೇವಕರು, ಬೋಧಕ ಬೋಧಕೇತರ ಸಿಬ್ಬಂದಿಯವರು ಚಂದ್ರವಳ್ಳಿ ಸುತ್ತಮುತ್ತಲಿನ ದೇವಸ್ಥಾನದ ಆವರಣ, ಐತಿಹಾಸಿಕ ಗುಹೆ ಮುಂಭಾಗ, ಕೆರೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.