ನಾಯಕನಹಟ್ಟಿಪಟ್ಟಣದಲ್ಲಿ ಇಂದು ವಿಶ್ವಕರ್ಮ ಜಯಂತಿ ಸಂಭ್ರಮಾಚರಣೆ ವಿಶ್ವಕರ್ಮರ ಉತ್ಸವ ಮೂರ್ತಿ ಅದ್ದೂರಿ ಪಟ್ಟಣದಲ್ಲಿ ಮೆರವಣಿಗೆ
ನಾಯಕನಹಟ್ಟಿ:: ವಿಶ್ವಕರ್ಮ ಆಧುನಿಕ ಜಗತ್ತಿನ ಶ್ರೇಷ್ಠ ಇಂಜಿನಿಯರ್ ಶ್ರೀ ಕೃಷ್ಣನ ಮಧುರದಿಂದ ಹಿಡಿದು ದೊರೆಕದವರೆಗೂ ವಿಶ್ವಕರ್ಮ ನಿರ್ಮಾಣ ಮಾಡಿರುವುದು ಸ್ವರ್ಗ ಲೋಕ ಕಟ್ಟಬೇಕಾದರೆ ವಿಶ್ವಕರ್ಮಣಿ ಮೂಲ ಸಾಕ್ಷಾತ್ ಬ್ರಹ್ಮನೇ ವಿಶ್ವಕರ್ಮ ಎಂದು ವಿಶ್ವಕರ್ಮ ಸಂಘದ ಕಾರ್ಯದರ್ಶಿ ಪಿ. ಲೋಕೇಶ್ ಚಾರಿ ಹೇಳಿದ್ದಾರೆ
ಅವರು ಭಾನುವಾರ ವಿಶ್ವಕರ್ಮ ಜಯಂತಿಯನ್ನು ವಿಶ್ವಕರ್ಮ ಉತ್ಸವಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ ವಿಶ್ವಕರ್ಮ ಜಯಂತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮ ಭಾವಚಿತ್ರ ಉತ್ಸವ ಮೂರ್ತಿಯನ್ನು ಮೆರವಣಿಗೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಂಘದ ಅಧ್ಯಕ್ಷ ಬಿ ತಿಪ್ಪೇಶಚಾರಿ, ಕಾರ್ಯದರ್ಶಿ ಪಿ ಲೋಕೇಶ್ ಚಾರಿ, ಉಪಾಧ್ಯಕ್ಷ ಕೆ ವೆಂಕಟೇಶ್ ಚಾರಿ, ಆರ್ ವೆಂಕಟೇಶ್ ಚಾರಿ, ಆರ್ ಹನುಮಂತಚಾರಿ, ಶಂಕರಾಚಾರಿ, ಶ್ರೀನಿವಾಸ್ ಚಾರಿ, ಕಾಳಚಾರಿ, ಧನಂಜಯ ಚಾರಿ, ಮಹಾಂತೇಶ್ ಚಾರಿ, ಕೃಷ್ಣ, ಲೇಪಾಕ್ಷಾಚಾರಿ, ಮೌನೇಶ ಚಾರಿ, ಚಂದ್ರಾಚಾರಿ, ಮಹಿಳಾ ಸಂಘದವರು ಸೇರಿದಂತೆ ಮುಂತಾದವರು ಇದ್ದರು