ಚಳ್ಳಕೆರೆ ನಗರದ ಲೋಕಪಯೋಗಿ ಇಲಾಖೆಯಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯರವರ ಜನ್ಮದಿನದ ಅಂಗವಾಗಿ ಅಭಿಯಂತರರ ದಿನ ಹಾಗೂ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಛೇರಿಯಲ್ಲಿ ಪ್ರತಿಷ್ಠಾಪಿಸಿದ ಸರ್.ಎಂ.ವಿಶ್ವೇಶ್ವರಯ್ಯ ರವರ ಪುತ್ಥಳಿಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೂವು ಮಾಲೆ ಹಾಕಿ ಕೆಕ್ ಕತ್ತರಿಸುವ ಮೂಲಕ ಜನ್ಮದಿನಚರಣೆ ಆಚರಿಸಿದರು.
ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೋಕಪಯೋಗಿ ಇಲಾಖೆ ವಿಜಯ್ ಬಾಸ್ಕರ್ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯರವರ ಜನ್ಮ ದಿನದ ಪ್ರಯುಕ್ತ ನಾವು ಅಭಿಯಂತರರ ದಿನವÀನ್ನು ಆಚರಿಸುತ್ತಿದ್ದೇವೆ. ಸರ್ ಎಂ ವಿಶ್ವೇಶ್ವರಯ್ಯರವರ ಕೊಡುಗೆಗಳನ್ನು ನಾವು ಇಂದು ಸ್ಮರಿಸುವಂತಹ ದಿನ. ಇಂಜಿನಿಯರುಗಳು ದೇಶ ಕಟ್ಟುವಂತಹ ಕೆಲಸವನ್ನು ಮಾಡುತ್ತಾರೆ. ಸಮಾಜದ ಒಳಿತಿಗಾಗಿ ಶ್ರಮಿಸುತ್ತಾರೆ ಎಂದರು.
ಇನ್ನೂ ಶಾಸಕ ಟಿ.ರಘುಮೂರ್ತಿ ಮಾತನಾಡಿ, ವಿವಿಧ ಕ್ಷೇತ್ರಗಳ ಅಬಿವೃದ್ಧಿಯಲ್ಲಿ ಇಂಜಿನಿಯರುಗಳ ಕೊಡುಗೆ ಅಪಾರವಾದುದು. ಭವಿಷ್ಯದ ಇಂಜಿನಿಯರುಗಳಿಗೆ ಆರ್ಟಿಪಿಷಿಯಲ್ ಇಂಟಲಿಜೆನ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೇರಳವಾದ ಅವಕಾಶಗಳಿದ್ದು, ವಿದ್ಯಾರ್ಥಿಗಳು ಕೇವಲ ಒಂದು ಕ್ಷೇತ್ರಕ್ಕೆ ತಮ್ಮನ್ನು ತಾವು ಸೀಮಿತಗೊಳಿಸದೆ ಬೇಡಿಕೆ ಇರುವ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕು. ನಾವು ಈ ದಿನ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದ್ದೇವೆ. ಪ್ರಭುತ್ವದಿಂದ ಪ್ರಜಾಪ್ರಭುತ್ವ. ನಮ್ಮನ್ನು ನಾವು ಆಳುತ್ತಿದ್ದೇವೆ. ನಮ್ಮನ್ನು ಆಳುವವರನ್ನು ನಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರö್ಯವನ್ನು ನಾವು ಪಡೆದಿದ್ದೇವೆ. ನಮ್ಮ ಕಾರ್ಯಕ್ಷೇತ್ರ ಯಾವುದೇ ಆಗಿರಲಿ ನಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ ನಮಗೆ ದೊರೆತಿರುವ ಹಕ್ಕುಗಳಿಗೆ ನಾವು ನ್ಯಾಯ ಒದಗಿಸಬೇಕಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಶಾಸಕರ ಆಪ್ತರಾದ ಸತ್ಯನಾರಯಣರೆಡ್ಡಿ, ಕುಡಿಯುವ ನೀರು ಇಲಾಖೆಯ ಎಇಇ ಕಾವ್ಯ, ಇಂಜಿನಿಯಾರ್ ರಾಜಪ್ಪ, ಕಛೇರಿ ಸಿಬ್ಬಂದಿ ಸಿದ್ದಪ್ಪ, ತಹಶಿಲ್ದಾರ್ ರೇಹಾನ್ ಪಾಷ, ಇನ್ನಿತರೆ ಜನಪ್ರತಿನಿಧಿಗಳು ಅಧಿಕಾರಿಗಳು ಪಾಲ್ಗೊಂಡಿದ್ದರು.

Namma Challakere Local News
error: Content is protected !!