ಚಳ್ಳಕೆರೆ : ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಜೀವನ ನಡೆಸಲು ನಿಮ್ಮ ಉತ್ತಮ ನಡೆತೆ ಮೇಲೆ ಇದೆ, ಕುಟುಂಬದಲ್ಲಿ ಮಕ್ಕಳೊಂದಿಗೆ ಪ್ರತಿ ವಿಶ್ವಾಸದಿಂದ ಜೀವನ ನಡೆಸಲು ನಿಮ್ಮ ಸನ್ ನಡೆತೆ ಮಾರ್ಗವಾಗಿದೆ ಎಂದು ಡಿವೈಸ್ಪಿ ರಾಜಣ್ಣ ರೌಡಿ ಶೀಟರ್ ಗಳಿಗೆ ಕಿವಿಮಾತು ಹೇಳಿದರು.
ನಗರದ ಪೋಲಿಸ್ ಠಾಣೆ ಆವರಣದಲ್ಲಿ ಪೋಲಿಸ್ ಇಲಾಖೆವತಿಯಿಂದ ರೌಡಿಶೀಟರ್ ಗಳಿಗೆ ಆಯೋಜಿಸಿದ್ದ ಪೆರೆಡ್‌ನಲ್ಲಿ ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿ ಕಿವಿಮಾತು ಹೇಳೀದರು.
ನಗರ ಹಾಗೂ ಗ್ರಾಮೀಣ ಭಾಹದಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳು ಜರುಗಲಿದ್ದು ಕಾನೂನು ಸುವ್ಯವಸ್ಥೆಗೆ ತೊಡಕು ಉಂಟಾದರೆ ಅಂತವರ ವಿರುದ್ದು ಮತ್ತೆ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಸಾಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ನಡೆಸ ಬೇಕು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನೂ ನಿಮ್ಮ ನಡೆತೆ ಮೇಲೆ ನಿಮ್ಮ ಪ್ರಕರಣದ ಹಂತಗಳು ಇವೆ, ಚಳ್ಳಕೆರೆ ತಾಲೂಕು ಶಾಂತಿಯುತವಾಗಿದೆ ಎಲ್ಲಾ ಜಾತಿ ಜನಾಂಗ ಧರ್ಮದ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ ಹಬ್ಬ ಹರಿದಿನಗಳು ಸಮೀಪಿಸುತ್ತಿರುವುದರಿಂದ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಮ್ಮ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತದೆ ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕು. ಒಂದು ವೇಳೆ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಠಾಣೆ ಪಿ ಐ. ಆರ್ ಎಫ್ ದೇಸಾಯಿ . ಪಿಎಸ್ಐ ಗಳು ಉಪಸ್ಥಿತರಿದ್ದರು.