ಪಟ್ಟಣದ .ಎಫ್. ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ಶೇಷಾದ್ರಿ ನಾಯಕ್
ನಾಯಕನಹಟ್ಟಿ:: ತಾಯಿಯ ಎದೆಹಾಲು ಅಮೃತವಿದ್ದಂತೆ ಪ್ರತಿಯೊಬ್ಬ ತಾಯಿಂದಿರು ತಮ್ಮ ಮಗುವಿಗೆ ಆರು ತಿಂಗಳವರೆಗೆ ಎದೆ ಹಾಲು, ಕುಡಿಸಬೇಕು ಎಂದು ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್ ಹೇಳಿದ್ದಾರೆ.
ಪಟ್ಟಣದ ಐದನೇ ವಾರ್ಡಿನ “ಎಫ್” ಅಂಗನವಾಡಿ ಕೇಂದ್ರದಲ್ಲಿ ಶಿಶು ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ ತಾಯಿಯ ಎದೆಯಲಿನಲ್ಲಿ ಮಗುವಿನ ಬೆಳವಣಿಗೆ ಬೇಕಾದ ಪೋಷ್ಠಿಕತೆ ಖನಿಜಾಂಶ ಮತ್ತು ಹೇರಳವಾದ ನೀರಿನ ಅಂಶಗಳು ಅಡಕವಾಗಿವೆ ಮಗುವಿಗೆ ಇದು ಮೊದಲ ಲಸ್ಕಿಯಾಗಲಿದೆ ಮೊದಲು ಮೂರು ದಿನದ ಹಾಲಿನಲ್ಲಿ ಹೆಚ್ಚು ರೋಗನಿರೋಧಕಗಳಿರಲಿದ್ದು ಮಗುವಿಗೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅದೇ ರೀತಿ ಸೋಂಕುಗಳಿಂದ ರಕ್ಷಣೆ ನೀಡುತ್ತದೆ ಮಗು ಜನಿಸಿದ ಅರ್ಧ ಗಂಟೆಯೊಳಗೆ ಹಾಲುಣಿಸಲು ಪ್ರಾರಂಭಿಸಿ ಆರು ತಿಂಗಳವರೆಗೆ ಎದೆಯಾಳು ಮಾತ್ರ ನೀಡಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್ ತಿಳಿಸಿದರು.
ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಸುಕನ್ಯಾ ಮಾತನಾಡಿ ಪ್ರತಿ ವರ್ಷವೂ ಆಗಸ್ಟ್ 1ರಿಂದ ಏಳನೇ ತಾರೀಕಿನ ರವರಿಗೆ ವಿಶ್ವ ಸ್ತನ್ಯ ಪಾನ ಸಪ್ತಹ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಮಗು ಹುಟ್ಟಿದ ಅರ್ಧ ಗಂಟೆ ಒಳಗೆ ಎದೆ ಹಾಲು ಕುಡಿಸಬೇಕು ತಾಯಿಯ ಎದೆಹಾಲಿನಲ್ಲಿ ಪೌಷ್ಟಿಕಾಂಶವುಳ್ಳ ಸ್ವತ್ತವನ್ನು ಹೊಂದಿರುತ್ತದೆ ಮಗುವಿಗೆ
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಪ್ರತಿಯೊಬ್ಬ ತಾಯಿ ಎದೆ ಹಾಲು ನೀಡಬೇಕು ಎದೆ ಹಾಲು ಕುಡಿಸುವುದರಿಂದ ಮಗುವಿಗೆ ಅತಿಸಾರಭೇದಿ ಅಸ್ತಮಾ ಗ್ಯಾಸ್ಟಿಕ್ ಈ ರೋಗಗಳು ಬಾರದಂತೆ ರಕ್ಷಿಸುತ್ತದೆ ಒಂದು ದಿನಕ್ಕೆ ಒಬ್ಬ ತಾಯಿ ತನ್ನ ಮಗುವಿಗೆ ಎಂಟರಿಂದ 10 ಬಾರಿ ಹಾಲುಣಿಸಬೇಕು ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ ಆದ್ದರಿಂದ ಸರ್ಕಾರದ ಆದೇಶದಂತೆ ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ವಿವಾಹವನ್ನು ಮಾಡಬೇಕು ಎಂದು ತಾಯಂದಿರಿಗೆ ಮನವರಿಕೆ ಮಾಡಿದರು.
ಇನ್ನೂ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಚೈತ್ರ ಮಾತನಾಡಿ ಎದೆ ಹಾಲು ಆರು ತಿಂಗಳ ವರಗೆ ನೀಡಬೇಕು
ಪೋಷಕಾಂಶವುಳ ಆಹಾರ ಪದಾರ್ಥಗಳನ್ನು ಸೊಪ್ಪು ತರಕಾರಿಯಾಗಿ ಸೇವಿಸುವುದರಿಂದ ಪೌಷ್ಟಿಕಾಂಶ ಹೆಚ್ಚಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆರಾದ ಎಲ್ ದ್ರಾಕ್ಷಾಯಿಣಿ, ಬಿ ಮಂಗಳಮ್ಮ, ಅನುಸೂಯಮ್ಮ, ರತ್ನಮ್ಮ, ಪರಮ ಜ್ಯೋತಿ,
ಅಂಗದವಾಡಿ ಶಿಕ್ಷಕಿರಾದ ಆರ್ ಸರಸ್ವತಿ, ವಿ ನಾಗರತ್ನಮ್ಮ, ಡಿ ಎಂ ನಾಗರತ್ನಮ್ಮ, ಎಸ್ ಸರೋಜಮ್ಮ, ಎಚ್ ಶೈಲಾ, ಪಿ ಶೈಲಾ ಬಾಯಿ, ಆರ್ ಲತಾಬಾಯಿ, ಅಂಗನವಾಡಿ ಸಹಾಯಕಿ ಕೌಸರ್ ಬಾನು, ಸೇರಿದಂತೆ ಗರ್ಭಣಿ ಬಾಣತಿಯರು ಇದ್ದರು,