ಶೇಂಗಾ ಬೆಳೆಯಲ್ಲಿ ಕಳೆಹುಲ್ಲು ಸ್ವಚ್ಛತೆ ಮಾಡಲು ಔಷಧಿ ಯಂತ್ರದ ಮೊರೆ ಹೋದ ರೈತರುಗಳು
ಚಳ್ಳಕೆರೆ ಸುದ್ದಿ: ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆ ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಶೇಂಗಾ ಬೆಳೆಯನ್ನು ಬಿತ್ತನೆ ಮಾಡಿರುವ ರೈತರಗಳು ಬಿತ್ತನೆ ಮಾಡಿರುವ ಶೇಂಗಾ ಬೆಳೆಯ ಎಡೆಕುಂಟೆ ಬೇಸಾಯ ಮಾಡಿ ಕಳೆಹುಲ್ಲು ಸ್ವಚ್ಛಗೊಳಿಸಬೇಕಿದ್ದು.ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೃಷಿ ಚಟುವಟಿಕೆಗಳು ಕುಂಠಿತವಾಗಿ ನೆಲಕಚ್ಚಿವೆ.
ವಿಪರೀತ ಮಳೆಯಿಂದ ಹೊಲದಲ್ಲಿ ಕಳೆಹುಲ್ಲು ಹೆಚ್ಚಾಗಿ ಬೆಳೆದಿದ್ದು ಹಾಗೂ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ವಿವಿಧ ಕೀಟ ಬಾದೆ ರೋಗಕ್ಕೆ ಶೇಂಗಾ ಬೆಳೆ ತುತ್ತಾಗಿದ್ದು. ರೈತರುಗಳು ಕಳೆನಾಶಕ ಔಷಧಿಯನ್ನು ಟ್ಯಾಕ್ಟರ್ ಯಂತ್ರಕ್ಕೆ ಅಳವಡಿಸಿರುವ ಸ್ಪೇರ್ ಔಷಧಿ ಮಿಷಿನ್ ಸಹಾಯದಿಂದ ಕಳೆಹುಲ್ಲು, ಕೀಟಬಾದೆ ರೋಗ, ನಾಶಪಡಿಸಲು ತಾಲೂಕಿನ ರೈತರುಗಳು ಮುಂದಾಗಿದ್ದಾರೆ.
ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಪ್ರತಿಕ್ರಿಸಿದ ಸ್ಪೇರ್ ಔಷಧಿ ಯಂತ್ರದ ಮಾಲೀಕ ದಾಸಪ್ಪ ಅವರು ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಲು 15 ದಿನದ ಹಿಂದೆ ಔಷಧಿ ಯಂತ್ರವನ್ನು ಟ್ಯಾಕ್ಟರ್ ಗೆ ಅಳವಡಿಸಿಕೊಂಡಿದ್ದೇವೆ. ಇದರ ಸಹಾಯದಿಂದ ಮೆಕ್ಕೆಜೋಳ, ಶೇಂಗಾ, ಕಡಲೆ, ತೊಗರಿ, ಹತ್ತಿ, ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಲು ಸಹಾಯವಾಗಿದೆ. 1 ಲೀಟರ್ ಔಷಧಿಯಿಂದ 3 ಮೂರು ಎಕರೆಗೆ ಔಷಧಿ ಹೊಡೆಯುತ್ತೇವೆ. ರೈತರು ನೀರಿನ ವ್ಯವಸ್ಥೆಯನ್ನು ಮಾಡಿದರೆ ಒಂದು ದಿನಕ್ಕೆ 20 ರಿಂದ 25 ಎಕರೆ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡುತ್ತೇವೆ ಎಂದು ತಿಳಿಸಿದರು.