ಚಳ್ಳಕೆರೆ: ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದೆ ಕರೆಯಿಸಿಕೊಳ್ಳುವ ಪತ್ರಿಕಾರಂಗ ಸಾಮಾಜಿಕ ಬದ್ದತೆಯನ್ನು ಉಳುಸಿಕೊಳ್ಳಲು ಸ್ವತಂತ್ರö್ಯವಾಗಿ ನೈಜತೆಯನ್ನು ಕಾಪಾಡಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಪಂಚಾಯಿತ್ ಸಭಾಗಂಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿAದ ಆಯೋಜಿಸಿದ್ದ ಪ್ರತಿಕಾ ದಿನಾಚರಣೆಯನ್ನು ಕುರಿತು ಮಾತನಾಡಿದರು. ಸಮಾಜಕ್ಕೆ ಸುದ್ದಿಕೊಡುವ ಭರದಲ್ಲಿ ಸುದ್ದಿಗಳನ್ನು ತಿರುಚುವುದು ಬೇಡ, ಸಾರ್ವಜನಿಕರಿಗೆ ನೈಜಸುದ್ದಿ ತಲುಪಿಸುವ ಕೆಲಸವಾಗಬೇಕು. ಇಂದು ಎಲೆಕ್ರಾö್ಟನಿಕ್ ಮಾಧ್ಯಮಗಳ ನಡುವೆ ಪತ್ರಿಕಾರಂಗ ತಮ್ಮದೆ ಆದ ಅಸ್ತಿತ್ವವನ್ನು ಉಳುಸಿಕೊಂಡಿದೆ. ಇಂದು ನಡೆದ ಹಲವು ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವವರು ಸಹ ಪತ್ರಕರ್ತ ಮಾಡುವ ಕೆಲಸವನ್ನು ಮಾಡಿ ಅವರೆ ಸುದ್ದಿ ಮುಟ್ಟಿಸುವವರಾಗಿದ್ದಾರೆ, ಸ್ಥಳೀಯ ಪತ್ರಕರ್ತರನ್ನು ಗುರುತಿಸುವ ಕೆಲಸವಾಗುತ್ತದೆ ಅದೇ ರೀತಿಯಲ್ಲಿ ನಿಮ್ಮ 13 ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಳಿ ಚರ್ಚಿಸಿ ಜಾರಿಗಳಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ ಎಂದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನಾ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪತ್ರಿಕೆ ನಶಿಸಿ ಹೊಗುತ್ತದೆ ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಆದ್ದರಿಂದ ಸಂವಿಧಾನ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗ ಉತ್ತಮ ಕಾರ್ಯ ಮಾಡುವ ಮೂಲಕ ಪಕ್ಷಬೇಧ ಭಾವ ಮಾಡದೆ ಸಮಾನ ಸ್ಥಿತಿಯಲ್ಲಿ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ ನಿಲುವಿಗೆ ನಿಲ್ಲಬೇಕು, ಅದೇ ರೀತಿಯಲ್ಲಿ ಇಂದು ಪತ್ರಕರ್ತರ ಗೋಳನ್ನು ಯಾವ ಸರಕಾರಗಳು ಕೇಳುವುದಿಲ್ಲ ಹಿಂದಿನ ಸರಕಾರ ಕಿವಿಗೊಡದೆ ತನ್ನ ಅವಧಿ ಮುಗಿಸಿಕೊಂಡಿತು ಇನ್ನೂ ಈಗೀನ ಕಾಂಗ್ರೇಸ್ ನೇತೃತ್ವದ ಸರಕಾರ ರಾಜ್ಯದ 15 ಸಾವಿರ ಪತ್ರಕರ್ತರಲ್ಲಿ ಕೇವಲ ಬೆಳಣಿಕೆಯಷ್ಟು ಮಾತ್ರ ಪ್ರತಕರ್ತರಿಗೆ ಮಾಶಸನಾ ನೀಡುತ್ತಿದೆ ಇನ್ನೂ ಸುದ್ದಿಗಾಗಿ ತೆರಳುವ ಪತ್ರಕರ್ತನಿಗೆ ಬಸ್ ಪಾಸ್ ನೀಡುವಂತೆ ಕಳೆದ ಮೂರು ವರ್ಷಗಳಿಂದ ಬೇಡಿಕೆ ಇಟ್ಟಿದ್ದೆವೆ ಆದರೆ ಸ್ಪಂಧನೆ ಇಲ್ಲ, ಇನ್ನೂ ಬೆಂಗಳೂರು ಬಿಎಂಟಿಸಿ ಘಟಕದಿಂದ ಕೇವಲ 600 ರೂಪಾಯಿ ಪಡೆದು ವರ್ಷದ ಉದ್ದಕ್ಕೂ ಉಚಿತ ಪಾಸ್ ನೀಡುತ್ತದೆ ಅದೇ ಮಾದರಿಯಲ್ಲಿ ರಾಜ್ಯದ ಉದ್ದಗಲಕ್ಕೂ ವಿಸ್ತರಿಸಿದಬೇ ಎಂದು ಹೇಳಿದರು.

ವೃತ್ತ ನಿರೀಕ್ಷಕ ಆರ್.ಎಪ್.ದೇಸಾಯಿ ಮಾತನಾಡಿ, ಸಾಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಪತ್ರಿಕೆ ಮಾಡುತ್ತಿದೆ ಅಂತಹ ಪತ್ರಿಕಾ ರಂಗವನ್ನು ನಾವು ಸಂವಿಧಾನದ ನಾಲ್ಕನೆ ಅಂಗವಾಗಿ ಪರಿಗಣಿಸಿದ್ದೆವೆ, ಪೊಲೀಸ್ ಇಲಾಕೆ ಖಾಕಿ ತೊಟ್ಟು ಸಾರ್ವಜನಿಕರ ಸೇವೆ ಮಾಡಿದರೆ ಖಾಕಿ ಇಲ್ಲದೆ ದಿನದ ಇಪ್ಪತ್ತುನಾಲ್ಕು ಗಂಟೆಗಳ ಕಾಲ ಸಾಮಾಜದ ಹಾಗುಹೊಗುಗಳ ಬಗ್ಗೆ ಮಾಹಿತಿ ಪಡೆದು ಬೆಳಕು ಚೆಲ್ಲುವ ಕಾರ್ಯ ಪತ್ರಕರ್ತರು ಮಾಡುತ್ತಿದ್ದಾರೆ, ಅದರಂತೆ ಪತ್ರಕೆಗಳ ಪಾತ್ರ ಬಹಳಮುಖ್ಯವಾಗಿದೆ ಎಂದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಿ.ಆನಂದಪ್ಪ ಮಾತನಾಡಿ, ಸಮಾಜದ ನಾಲ್ಕನೆ ಅಂಗ ಪತ್ರಿಕಾ ರಂಗ ಅದು ಮೂರು ಅಂಗಗಳನ್ನು ಬಹಳ ತೀಕ್ಷ÷್ಣವಾಗಿ ಮಾಡುವುದರಿಂದ ಇಂದು ಸಮಾಜದಲ್ಲಿ ಸ್ವಲ್ಪ ಮಟ್ಟಿಗೆ ಬ್ರಷ್ಟಚಾರ, ಕೋಮು ದ್ವೇಷಗಳನ್ನು ಮಟ್ಟಹಾಕಲಿಗೆ ಸಹಯಾಕಾರಿಯಾಗಿವೆ, ಇನ್ನೂ ಪ್ರತಿಕೆ ತನ್ನದೇ ರೀತಿಯಲ್ಲಿ ಪ್ರತಿಕಾ ವೃತ್ತಿ ಅವಲಂಬಿಸಿದೆ ಎಂದು ಹೇಳಿದರು
ಪತ್ರಕರ್ತ ಮೈತ್ರಿ ದ್ಯಾಮಣ್ಣ ಮಾತನಾಡಿ ಪತ್ರಕರ್ತರು ತಮ್ಮ ಸಮಗ್ರ ಲೇಖನದ ಮೂಲಕ ಸಮಾಜಕ್ಕೆ ಆಗುತ್ತಿರುವ ಅನ್ಯಾಯ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ರಾಜಕೀಯದವರಿಂದ ದೊರವಿದ್ದು ಜನರ ಸಮಸ್ಯಗಳಿಗೆ ಸ್ಪಂಧಿಸುವ ಕೆಲಸವಾಗಬೇಕು. ಪತ್ರಕರ್ತರು ವಿಮರ್ಶೆ, ವಿಶ್ಲೇಷಣೆ, ತನಿಖೆ ವರದಿಗಳನ್ನು ಬರೆಯುವುದರ ಮೂಲಕ ಗಂಭೀರ ಸಮಸ್ಯೆಗಳ ಸಮಗ್ರ ವರದಿ ಮಾಡುವ ಮೂಲಕ ಸರ್ಕಾರಕ್ಕೆ ತಲುಪುವಂತೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸಾಹಿತಿ, ಪತ್ರಕರ್ತರ ಕರ‍್ಲಕುಂಟೆ ತಿಪ್ಪೆಸ್ವಾಮಿ ಮಾತನಾಡಿ, ನಾಡಿನ ಎಲ್ಲಾ ಸಮುದಾಯಗಳ ಜತೆಗೆ ಸಾಮರಸ್ಯ ಉಳಿಸಿಕೊಂಡು ಸಾಮಾಜದಿಂದ ದೂರವಿರುವ ವಿವಿಧ ಸಮುದಾಯದ ಏಳಿಗೆಗೆ ಪತ್ರಿಕೆ ಶ್ರಮಿಸುತ್ತಿದೆ. ಸಾಮಾಜದ ಅಂಕುಡೊAಕುಗಳನ್ನು ತಿದ್ದುವ ಮೂಲಕ ಸಾಮಾಜಮುಖಿ ಕಾರ್ಯ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ, ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಡಿ.ದ್ಯಾಮರಾಜ್, ಗೌರವಾಧ್ಯಕ್ಷ ಡಿ.ವೀರಣ್ಣ, ಕಾರ್ಯದರ್ಶಿ ಮಂಜುಜಾಲಿ, ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ನಗರಸಭೆ ಸ್ಥಾಮಿ ಅಧ್ಯಕ್ಷ ರಾಘವೇಂದ್ರ, ಸದಸ್ಯೆ ಸಾವಿತ್ರಮ್ಮ, ವೀರಭದ್ರನಾಯಕ, ಗ್ರಾಪಂ.ಅಧ್ಯಕ್ಷೆ ಪಾರಿಜಾತ, ವಾರಿರ‍್ಸ್ ಶಾಲೆಯ ಕಾರ್ಯದರ್ಶಿ ಮಾರುತಿ, ನಾವೇಲ್ಲಾ ಎನ್.ಮಹೇಶ. ಜಡೆಕುಂಟೆ ಕುಮಾರ್, ಇದ್ದರು.

ಸನ್ಮಾನಿತರಾದ ಸೊಮಗುದ್ದು ರಂಗಸ್ವಾಮಿ, ಕರ‍್ಲಕುಂಟೆ ತಿಪ್ಪೆಸ್ವಾಮಿ, ಡಾ.ಲೋಕೇಶ್, ರಾಮಾಂಜನೇಯ ಕೆ., ಮಾರುತಿ, ಹಾಗೂ ಸಮಾಜ ಸೇವಕರಿಗೂ ಸನ್ಮಾನಿಸಿದರು.
ಪೋಟೋ, ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರತಿಕಾ ದಿನಾಚರಣೆಯ ಉದ್ಘಾಟನೆಯನ್ನು ಶಾಸಕ ಟಿ.ರಘುಮೂರ್ತಿ ನೆರೆವೆರಿಸಿದರು.

About The Author

Namma Challakere Local News
error: Content is protected !!