ಚಿತ್ರದುರ್ಗ
ಜೂನ್.17:
2023-24ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಜೂನ್ 15 ರಿಂದ ಪ್ರಾರಂಭವಾಗಿದ್ದು, www.tw.kar.nic.in ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿ ನಿಲಯಗಳ ವಿವರ ಇಂತಿದೆ. ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಐಯುಡಿಪಿ ಲೇ ಔಟ್ 6ನೇ ಕ್ರಾಸ್ ಚಿತ್ರದುರ್ಗ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಜೋಗಿಮಟ್ಟಿ ರಸ್ತೆ 4ನೇ ಕ್ರಾಸ್ ಚಿತ್ರದುರ್ಗ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ (ಹೊಸದು) ತರಳುಬಾಳು ನಗರ 1ನೇ ಕ್ರಾಸ್ ಎಸ್ಜೆಎಂಐಟಿ ಹಿಂಭಾಗ ಚಿತ್ರದುರ್ಗ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ (ಹೊಸದು) ನಿಲಯ, ರೈಲ್ವೆ ಬ್ರಿಡ್ಜ್, ವದ್ದಿಕೆರೆ ಸಿದ್ದಪ್ಪ ಲೇ ಔಟ್, ತುರುವನೂರು ರಸ್ತೆ ಚಿತ್ರದುರ್ಗ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08194-226659 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.