ಚಿತ್ರದುರ್ಗ ಜೂನ್.13:
ಚಿತ್ರದುರ್ಗ ಅಂಚೆ ವಿಭಾಗೀಯ ಡಾಕ್ ಅದಾಲತನ್ನು ಇದೇ ಜೂನ್ 30ರಂದು ಮಧ್ಯಾಹ್ನ 4 ಗಂಟೆಗೆ ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯ ಫಿಲ್ಟರ್ ಹೌಸ್ ಹತ್ತಿರ, ಕೋಟೆ ರಸ್ತೆಯಲ್ಲಿರುವ ಚಿತ್ರದುರ್ಗ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಸಲಾಗುವುದು.

ಸಾರ್ವಜನಿಕರು ಮತ್ತು ಅಂಚೆ ಗ್ರಾಹಕರು ಅಂಚೆ ಸೇವೆಗಳಿಗೆ ಸಂಬಂದಿಸಿದ ದೂರು ಮತ್ತು ಸಲಹೆಗಳನ್ನು ಇದೇ ಜೂನ್ 29 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಅಂಚೆ ಅಧೀಕ್ಷಕರ ಕಚೇರಿ, ಕೋಟೆ ರಸ್ತೆ, ಫಿಲ್ಟರ್ ಹೌಸ್ ಹತ್ತಿರ, ಕಾಮನ ಬಾವಿ ಬಡಾವಣೆ ಚಿತ್ರದುರ್ಗ-577501 ಇವರಿಗೆ ತಲಪುವಂತೆ ಕಳುಹಿಸಬೇಕು ಎಂದು ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ಓ.ವಿರೂಪಾಕ್ಷಪ್ಪ ತಿಳಿಸಿದ್ದಾರೆ.

About The Author

Namma Challakere Local News
error: Content is protected !!