ಚಿತ್ರದುರ್ಗ ಜೂನ್.13:
ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗ್ರಾಮದ ನಿವಾಸಿ ಟಿ.ಸಚಿನ್ (25 ವರ್ಷ) ಅವರು ಕಾಣೆಯಾಗಿರುವ ಪ್ರಕರಣ 2023ರ ಮಾರ್ಚ್ 9 ರಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾಗಿರುವ ಯುವಕನ ಚಹರೆ ಇಂತಿದೆ. ಟಿ.ಸಚಿನ್ ತಂದೆ ಆರ್.ಆರ್.ತಿಪ್ಪೇಶಪ್ಪ ದೇವಾಂಗ ಜನಾಂಗ, ಸುಮಾರು 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ.
ಈ ಮೇಲ್ಕಂಡ ವ್ಯಕ್ತಿಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ಹೊಳಲ್ಕೆರೆ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಹೊಳಲ್ಕೆರೆ ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

Namma Challakere Local News
error: Content is protected !!