ಚಳ್ಳಕೆರೆ : ಅಲ್ಲಿ ಧನ್ಯತಾಭಾವ ಇತ್ತು, ಪಾಠ ಹೇಳಿಕೊಟ್ಟ ಗುರುವನ್ನು ಅಭಿನಂದಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರೆ, ಅದೇ ಗ್ರಾಮಸ್ಥರಲ್ಲಿ ಸಡಗರ ಸಂಭ್ರಮ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ, ಇಂತಹ ಸದೃಶ್ಯವನ್ನು ಕಂಡು ತಮ್ಮ ಜೀವನ ಸಾರ್ಥಕವಾಯಿತು ಎಂದು ಗುರುವಿನ ಮನ ತುಂಬಿ ಬಂದಿತ್ತು.
ಇಂತಹದೊAದು ದೃಶ್ಯ ಕಂಡಿದ್ದು ಚಳ್ಳಕೆರೆ ತಾಲೂಕಿನ ಘಟಪರ್ತಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೌದು ನಿಜಕ್ಕೂ ಶ್ಲಾಘನೀಯ
ಕಳೆದ 37 ವರ್ಷಗಳ ಕಾಲ ಸುದಿರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಎಸ್.ಮಂಜಪ್ಪ ನವರ ಗುರುವಿನ ಕೈಯಲ್ಲಿ ವಿದ್ಯೆ ಕಲಿತ ಅದೆಷ್ಟೋ ಸಾವಿರ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಸುಂದರವಾಗಲು ಈ ಗುರುವೇ ಕಾರಣಾಗಿದ್ದಾರೆ.
ಶಿಕ್ಷಕರನ್ನು ಅತ್ಯಂತ ಗೌರವದಿಂದ ಕಾಣುವ ಸಮಾಜ ನಮ್ಮದು ಅದರಲ್ಲೂ ಸೇವಾನಿಷ್ಠೆ ಮೆರೆದ ಶಿಕ್ಷಕರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಜೊತೆಗೆ ಅತ್ಯಂತ ಗೌರವದಿಂದ ಕಾಣುತ್ತೆವೆ.
ಅಂತಹ ಗುರುಗಳಾದ ಎಸ್.ಮಂಜಪ್ಪನವರು ಇದೇ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ 37ವರ್ಷಗಳ ಸುದಿರ್ಘ ಕಾಲ ವಿಶೇಷ ಸೇವೆ ಸಲ್ಲಿಸಿ. ಸಹಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ವಿದ್ಯಾರ್ಥಿಗಳ ಮತ್ತು ಪೋಷಕರ ಅಭಿಮಾನವನ್ನು ಗಳಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳು ಬಂದರೂ ಅವರು ಎದೆಗುಂದದೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎನ್ನುತ್ತಾರೆ ಜಿಬಿ ಮಹಾಂತೇಶ್.
ನಿವೃತ್ತಿಯ ಸಂದರ್ಭದಲ್ಲಿ ಅವರಿಗೆ ದೊರೆತ ಅದ್ದೂರಿಯ ಸನ್ಮಾನ ಸಮಾರಂಭ ಅದಕ್ಕೆ ಸಾಕ್ಷಿ ಎನ್ನಲಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 37 ವರ್ಷಗಳ ಕಾಲ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮೇ 31ರಂದು ನಿವೃತ್ತರಾದ ಎಸ್.ಮಂಜಪ್ಪ ನವರು ಧನ್ಯರು.
ಚಳ್ಳಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆಎಸ್.ಸುರೇಶ್ ಮಾತನಾಡಿ, ಶಿಕ್ಷಕರಾದ ಎಸ್.ಮಂಜಪ್ಪನವರ ಸರಳ ವ್ಯಕ್ತಿತ್ವ, ಸಹನೆ, ತಾಳ್ಮೆ, ಅಸಾಧಾರಣ ಸಂಘಟನಾ ಚಾತುರ್ಯ ಕರ್ತವ್ಯ ನಿಷ್ಠೆ, ಮತ್ತು ಅವರ ಗಟ್ಟಿತನ, ಶಾಲೆ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಈ ಇತರರಿಗೆ ಮಾದರಿಯಾಗಿದೆ.
ಹಳೆಯ ವಿದ್ಯಾರ್ಥಿಗಳು ಗ್ರಾಮಸ್ಥರು ತಾವೇ ಏರ್ಪಡಿಸಿ 2 ರಿಂದ 3 ಲಕ್ಷ ಖರ್ಚು ಮಾಡಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು ಈ ಕಾರ್ಯಕ್ರಮ ಏರ್ಪಡಿಸಿದ ತಮಗೆಲ್ಲರಿಗೂ ಇಲಾಖೆಯಿಂದ ವಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ರುದ್ರಪ್ಪ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಇವರ ಹೆಸರಿನಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿರುವುದು ಸಂತಸದಾಯಕ ವಿಚಾರ, ಇವರ ಮಹತ್ವದ ಕಾರ್ಯಕ್ಕೆ ಸಾದ ಬೆನ್ನುಲುಬಾಗಿ ನಿಲ್ಲುತ್ತೆನೆ ಮಕ್ಕಳಿಗೆ ನಾವು ಕೊಡಲು ಸಾಧ್ಯವಿಲ್ಲ ಆದರೆ ಜ್ಞಾನವನ್ನು ಮಾತ್ರ ನೀಡಲು ಸಾದ್ಯವೆಂದು ಹೇಳಿದರು. ನಿವೃತ್ತಿ ಹೊಂದಿದ ಎಸ್.ಮಂಜಪ್ಪ ಹೆಸರಿನಲ್ಲಿ ಹಳೆಯ ವಿದ್ಯಾರ್ಥಿಗಳ ನೂತನಾಗಿ ತೆರೆದ ಗ್ರಂಥಾಲಯಕ್ಕೆ ನನ್ನ ಸಹಕಾರವಿದೆ ಎಂದು ಸ್ಥಳದಲ್ಲೇ 5000 ದೇಣಿಗೆಯನ್ನು ಹಳೆಯ ವಿದ್ಯಾರ್ಥಿಗಳಿಗೆ ನೀಡಿದರು,
ಬಾಕ್ಸ್ :
ನಾನು ಕಳೆದ 37 ವರ್ಷಗಳ ಹಿಂದೆ ಈ ಶಾಲೆಗೆ ಆಗಮಿಸಿದ ಸಂಧರ್ಭದಲ್ಲಿ ನನಗೆ ಶೈಕ್ಷಣಿಕವಾಗಿ ಸಹಕಾರ ನೀಡಿದ ಎಲ್ಲಾ ನನ್ನ ಗ್ರಾಮದ ಪೋಷಕರಿಗೆ ಮೊದಲನೆದಾಗಿ ಧನ್ಯವಾದಗಳನ್ನು ಅರ್ಪಿಸುತ್ತಾ, ಇಲ್ಲಿ ಮೊದಲಿಗೆ ಬಂದಾಗ ಇಲ್ಲಿನ ಶೈಕ್ಷಣಿಕ ಮಟ್ಟ ತೀರ ಕುಂಠಿತವಾಗಿತ್ತು ಆದರೆ ಇಂತಹ ಬಯಲು ಸೀಮೆಯಲ್ಲಿ ಸುತ್ತಲಿನ ಸುಮಾರು 7 ಗ್ರಾಮಗಳಿಂದ ಮಕ್ಕಳು ಕಾಲು ನಡ್ನಿಗೆಯಲ್ಲಿ ಆಗಮಿಸುವುದು ನನ್ನ ಶಿಕ್ಷಕ ವೃತ್ತಿ ಬದುಕಿಗೆ ಮಹತ್ವ ಮೈಲು ಗಲ್ಲಾಗಿ ಪರಿಣಮಿಸಿತು ಸುಮಾರು 37 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಶಿಕ್ಷಕರಾಗುವುದು ಅಷ್ಟು ಸಿಲಭದ ಕೆಲಸವಲ್ಲ ಆದರೆ ಇಲ್ಲಿನ ಪೋಷಕರ ಸಹಕಾರ ಹಾಗೂ ಶೈಕ್ಷಣಿಕ ಮಟ್ಟ ನನ್ನ ನೆಚ್ಚಿನ ಮಕ್ಕಳ ವ್ಯಾಸಂಗ ನನ್ನ ಜೀವನದಲ್ಲಿ ಸಾರ್ಥಕವಾಗಿದೆ ..-
ಎಸ್.ಮಂಜಪ್ಪ ನಿವೃತ್ತ ಶಿಕ್ಷಕ ಘಟಪರ್ತಿ ಸರಕಾರಿ ಶಾಲೆ

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾದೇವಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಿ ಮಹಾಲಿಂಗಪ್ಪನವರು,ಪ್ರಧಾನ ಕಾರ್ಯದರ್ಶಿಗಳಾದ ಎಸ್‌ಟಿ.ತಿಪ್ಪೇಸ್ವಾಮಿ, ಪ್ರೌಢಶಾಲಾ ಶಿಕ್ಷಕರಾದ ಎಸ್.ರಾಜಣ್ಣ, ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಹೆಚ್.ರಾಜಣ್ಣ, ಸದಾಶಿವ, ಹನುಮಂತರಾಯ, ಸಣ್ಣಸೂರವ್ವ, ಈಶ್ವರಪ್ಪ, ಸಣ್ಣ ಪಾಪಣ್ಣ, ಭೀಮಣ್ಣ ಹಾಗೂ ಶಾಲೆಯ ಸಹಶಿಕ್ಷಕರು ಸುತ್ತಮುತ್ತಲ ಗ್ರಾಮದ ಶಿಕ್ಷಕರು ಗ್ರಾಮಸ್ಥರು ಮತ್ತು ಸಿಆರ್‌ಪಿ ಬಿಆರ್‌ಪಿಗಳು ಶಿಕ್ಷಣ ಸಂಯೋಜಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

Namma Challakere Local News
error: Content is protected !!