ಚಳ್ಳಕೆರೆ: ಮುಂಗಾರು ಆರಂಭಕ್ಕೂ ಮುನ್ನ ಅಧಿಕೃತ ಕೃಷಿ ಪರಿಕರ ಮಾರಾಟಗಾರರ ಸಭೆ ಮತ್ತು ಕಾರ್ಯಗಾರ ಮಾಡುತ್ತಿರುವುದು
ವ್ಯಾಪಾರದ ದೃಷ್ಟಿ, ಮಾನವೀಯ ದೃಷ್ಟಿಯಿಂದ ಭೂಮಿಯ ಆರೋಗ್ಯದ ದೃಷ್ಟಿಯಿಂದ ಉ್ತಮವಾದ, ಗುಣಮಟ್ಟದ ಪರಿಕರಗಳನ್ನು ಮಾರಾಟ ಮಾಡಬೇಕಿದೆ ಎಂದು ಉಪ ಕೃಷಿನಿರ್ದೇಶಕರಾದ ಶಿವಕುಮಾರ್ ಹೇಳಿದರು.

ಅವರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕೃತ ಕೃಷಿ ಪರಿಕರ ಮಾರಾಟಗಾರರ ಸಭೆ ಮತ್ತು ಕಾರ್ಯಗಾರ ತರಬೇತಿಯಲ್ಲಿ ಮಾತನಾಡಿದರು. ಮಾರಾಟಗಾರರು ಶಿಸ್ತು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಬೀಜ ಗೊಬ್ಬರ ಪರಿಕರಗಳ ಬಗ್ಗೆ ಕೃತಕ ಅಭಾವ ಸೃಷ್ಟಿಸಬಾರದು. ಜಿಲ್ಲೆಯು ಬರಗಾಲಕ್ಕೆ ಹೆಸರುವಾಸಿಯಾಗಿದ್ದು, ರೈತರಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕು. ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಗುಣಮಟ್ಟ ನಿಯಂತ್ರಣ ಕಾಯ್ದೆ ವ್ಯಾಪ್ತಿಯಲ್ಲಿ ಪಾರದರ್ಶಕವಾಗಿ ದಾಖಲೆಗಳನ್ನು ನಿರ್ವಹಿಸಬೇಕು ಎಂದರು.

ಇನ್ನೂ ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಮಾತನಾಡಿ,
ಖಾಸಗಿ ಕಂಪನಿಗಳ ರಿಯಾಯಿತಿಗಳಿಗೆ ಆಸೆ ಆಮೀಷಗಳಿಗೆ ಬಲಿಯಾಗದೇ ರೈತರಿಗೆ ಗುಣಮಟ್ಟದ ಪರಿಕರಗಳನ್ನು ಒದಗಿಸಬೇಕು.ದರಪಟ್ಟಿಯಲ್ಲಿರುವ ಹಾಗೆ ರೈತರಿಂದ ಹಣ ಪಡೆದು ಎಂಆರ್ ಪಿ ದರದಲ್ಲೇ ನೀಡಬೇಕು. ನಿಖರ ಬೆಲೆ, ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಬೀಜ, ರಸಗೊಬ್ಬರ ವಿಷಯದಲ್ಲಿ ಕೃತಕ ಅಭಾವ ಸೃಷ್ಟಿಸಿದರೆ ಮೇಲಾಧಿಕಾರಿಗಳ ಆದೇಶದಂತೆ ಪ್ರಕರಣ ದಾಖಲಿಸಬೇಕಾಗುತ್ತದೆ. ರೈತರ ಬೇಡಿಕೆ, ನಿರೀಕ್ಷೆಗೆ ತಕ್ಕಂತೆ ಪರಿಕರಗಳನ್ನು ಒದಗಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಬಬ್ಬೂರು ಫಾರಂ, ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ಚೌದರಿ ಮಾತನಾಡಿ,ದಿನೇದಿನೇ ಕಾನೂನು ಹೆಚ್ಚಾಗುತ್ತಿವೆ. ಮಾರಾಟಗಾರರು ಅದನ್ನು ಅನುಸರಿಬೇಕು, ಗಣಕೀಕೃತ ದಾಖಲೆಗಳನ್ನು ಇಟ್ಟುಕೊಳಬೇಕು ರೈತರೊಟ್ಟಿಗೆ ಸಹನೆಯಿಂದ ವರ್ತಿಸಬೇಕು, ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಬೇಕು ಎಂದರು.

ಈದೇ ಸಂಧರ್ಭದಲ್ಲಿ ಲೋಕೇಶಪ್ಪ, ಜಾಗೃತದಳ ಪ್ರವೀಣ್ ಕುಮಾರ್, ಕೃಷಿ ಪರಿಕರ ಮಾರಾಟಗಾರ ಸಂಘದ ಅಧ್ಯಕ್ಷ ಮಂಜುನಾಥ, ಆನಂದ್, ರವಿಕುಮಾರ್, ಪರುಶುರಾಮಪುರ ಕೃಷಿ ಅಧಿಕಾರಿ ಜೀವನ್, ನಾಯಕನಹಟ್ಟಿ ಕೃಷಿ ಅಧಿಕಾರಿ ಹೇಮಂತ ನಾಯ್ಕ್, ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!