ಪರಶುರಾಮಪುರ : ಶಾಲಾ-ಕಾಲೇಜು ಹಂತದ ವಿದ್ಯಾರ್ಥಿಗಳೂ ಸೇರಿದಂತೆ ಸಮುದಾಯದ ಜನರಿಗೆ ಪರಿಸರ ಸಂರಕ್ಷಣೆ ಕುರಿತು ಸ್ಥಳೀಯ ಆಡಳಿತ ತಿಳಿವಳಿಕೆ ಮೂಡಿಸಲು ಹತ್ತು ಹಲವು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯತೆ ಇದೆ ಎಂದು ಚಳ್ಳಕೆರೆ ಬಿಇಒ ಕಚೇರಿಯ ಇಸಿಒ ತಿಪ್ಪೇಸ್ವಾಮಿ ಹೇಳಿದರು
ಸಮೀಪದ ಪಿಲ್ಲಹಳ್ಳಿಗೇಟ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವಪರಿಸರದಿನದ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು
ನಮ್ಮ ಪೂರ್ವಜರು ತಮ್ಮ ಜೀವಿತಾವಧಿಯಲ್ಲಿ ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಕಲ್ಲು ಮಣ್ಣು ಮರಳು ಪ್ರಾಣಿ ಪಕ್ಷಿಗಳನ್ನು ತಮ್ಮ ವೈಯಕ್ತಿಯ ಬದುಕಿಗೆ ಮಾರಿಕೊಳ್ಳದೇ ಅವುಗಳ ಉತ್ಪನ್ನಗಳನ್ನು ಬಳಸಿಕೊಂಡೇ ಬದುಕಿದರು ಆದರೆ ನಾವಿಂದು ಈ ಪರಿಸರ ಸಂರಕ್ಷಣೆ ಮಾಡುವುದನ್ನು ಮರೆತು ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸಿಕೊಂಡು ಉಸಿರಾಡುವ ಗಾಳಿಗೂ ಕುತ್ತು ತಂದುಕೊAಡಿದ್ದೇವೆ ಎಂದರು
ಸಿಆರ್‌ಪಿ ಎಚ್ ನೀಲಕಂಠಪ್ಪ ಮಾತನಾಡಿ ಗ್ರಾಪಂ ವ್ಯಾಪ್ತಿಯ ಶಾಲಾ ಕಾಲೇಜು, ಅಂಗನವಾಡಿ ಕೇಂದ್ರಗಳೂ ಸೇರಿದಂತೆ ಬಸ್‌ನಿಲ್ದಾಣ, ಸಂತೆ ಮೈದಾನ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಟ್ಟು ಪೋಷಿಸಲು ನಾವೆಲ್ಲರೂ ಮುಂದಾಗಬೇಕು ಎಂದರು
ಹೋಬಳಿ ವ್ಯಾಪ್ತಿಯ ಜಾಜೂರು, ಸಿಎನ್‌ಹಳ್ಳಿ, ಚೌಳೂರು, ಪಗಡಲಬಂಡೆ, ಟಿಎನ್‌ಕೋಟೆ, ಎಸ್‌ದುರ್ಗ, ಪಿ ಮಹದೇವಪುರ, ಸಿದ್ದೇಶ್ವರನದುರ್ಗ, ದೇವರಮರಿಕುಂಟೆ, ದೊಡ್ಡಚೆಲ್ಲೂರು ಮತ್ತಿತರೆ ಗ್ರಾಪಂ ಕೇಂದ್ರಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಸಸಿ ನೆಡಲಾಯಿತು
ಇದೇ ವೇಳೆ ಪಿಆರ್‌ಪುರ ಗ್ರಾಮದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ವಿಶ್ವಪರಿಸರದಿನದ ಅಂಗವಾಗಿ ಸಸಿಗಳನ್ನು ನೆಡಲಾಯಿತು ಸಂದರ್ಭದಲ್ಲಿ ಇಸಿಒ ತಿಪ್ಪೇಸ್ವಾಮಿ, ಸಿಆರ್‌ಪಿ ಎಚ್ ನೀಲಕಂಠಪ್ಪ, ಮುಖ್ಯಶಿಕ್ಷಕ ಪಿ ಡಿ ಹನುಮಂತಯ್ಯ ಶಿಕ್ಷಕಿ ಭಾರತಿ ಹೋಬಳಿ ವ್ಯಾಪ್ತಿಯ ಮುಖ್ಯಶಿಕ್ಷಕರಾದ ಪ್ರಸನ್ನ, ಮಲ್ಲಿಕಾರ್ಜುನ, ಜೀವನಾಥ, ಸುದರ್ಶನಬಾಬು, ಸೋಮಶೇಖರಪ್ಪ, ಭೂತಮ್ಮ, ಗ್ರಾಮಸ್ಥರು ಇದ್ದರು

Namma Challakere Local News
error: Content is protected !!