ಚಳ್ಳಕೆರೆ : ಕಾಲೇಜಿನಲ್ಲಿ ಉತ್ತಮವಾದ ಶೈಕ್ಷಣಿಕ ವಾತಾವರಣವಿದ್ದು, ಶೈಕ್ಷಣಿಕ ಗುಣಮಟ್ಟಕ್ಕೆ ಇಲ್ಲಿನ ಪ್ರಾಧ್ಯಾಪಕರು ಆದ್ಯತೆಯನ್ನು ನೀಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರ ಭೇಟಿನೀಡಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಸಸಿನೆಟ್ಟು ನಂತರ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಚಳ್ಳಕೆರೆ ತಾಲ್ಲೂಕಿನಲ್ಲಿ ಅತ್ಯಂತ ಪ್ರತಿಷ್ಠಿತ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಳೆದ ಹತ್ತು ವರ್ಷಗಳಿಂದ ಉತ್ತಮವಾದ ಫಲಿತಾಂಶ ನೀಡಿದೆ : ಶಾಸಕ ಟಿ.ರಘುಮೂರ್ತಿ
ಗಳು ದಾಖಲಾಗಿ ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಅತ್ಯುತ್ತಮವಾದ ಕಾಲೇಜಾಗಿ ಹೊರಹೊಮ್ಮಿದೆ. ಅದಕ್ಕಾಗಿ ಕಾಲೇಜಿನಲ್ಲಿ ಯಾವುದೇ ರೀತಿಯ ಮೂಲಸೌಕರ್ಯಗಳ ಸಮಸ್ಯೆಗಳು ಎದುರಾಗದಂತೆ ಅಗತ್ಯ ನೆರವು ನೀಡಲಾಗಿದೆ. ಅಷ್ಟೇ ಅಲ್ಲದೆ ಸುಮಾರು ರೂ.5 ಕೋಟಿ ವೆಚ್ಚದಲ್ಲಿ ಕಾಲೇಜಿನಲ್ಲಿ ಸುಸ್ಚಿತವಾದ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡವು ಮೈಸೂರಿನ ಮಾನಸಗಂಗೋತ್ರಿ ಕಾಲೇಜಿನ ಕಟ್ಟಡದ ಮಾದರಿಯನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಹೆಚ್ಚು ಗ್ರಾಮೀಣ ಪ್ರದೇಶಗಳಿಂದ ಪದವಿಯ ವ್ಯಾಸಂಗಕ್ಕಾಗಿ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮವಾದ ಶೈಕ್ಷಣಿಕ ವಾತಾವರಣವನ್ನು ಶಾಸಕನಾಗಿ ನಿರ್ಮಿಸಿದ್ದೇನೆ.
ಹಾಗಾಗಿ ಕಾಲೇಜಿನಲ್ಲಿ ಇರುವ ಎಲ್ಲಾ ವಿಭಾಗಗಳ ಅಧ್ಯಾಪಕರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ ನೀಡಿ ಶ್ರಮಿಸಬೇಕು. ಹಲವು ದಿನಗಳ ಹಿಂದೆ ಕಾಲೇಜಿನಲ್ಲಿ ಪಾಠ ಪ್ರವಚನಗಳು ನಡೆಯುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ. ಈ ಎಲ್ಲಾ ಆರೋಪಗಳಿಗೆ ಸೂಕ್ತ ಸಮಜಾಯಿಸಿ ನೀಡಲು ಇದೇವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ರಂಗಪ್ಪನವರಿಗೆ ಸೂಚಿಸಿದರು.
ಆಗ ಪ್ರಾಂಶುಪಾಲರಾದ ಡಾ.ಆರ್.ರಂಗಪ್ಪ ಮಾತನಾಡಿ, “ಮಾರ್ಚ್ 28ರಿಂದ ಮೇ 15ರವರೆಗೆ ಕಾಲೇಜಿನಲ್ಲಿ ಹಲವು ಪ್ರಾಧ್ಯಾಪಕರು ಚುನಾವಣೆ ಕಾರ್ಯದ ನಿಮಿತ್ತ ತೆರಳಿದ್ದರು. ಮತ್ತು ಇನ್ನುಳಿದ ಪ್ರಾಧ್ಯಾಪಕರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯಗೊಳಿಸಿದ್ದರಿಂದ ದಾವಣಗೆರೆಗೆ ತೆರಳಿದ್ದರು. ಜೊತೆಗೆ ಚುನಾವಣೆಯ ನಿಮಿತ್ತ ಕಾಲೇಜಿನ ಕಟ್ಟಡವನ್ನು ಹಲವು ದಿನಗಳ ಕಾಲ ತಾಲ್ಲೂಕು ಆಡಳಿತ ಮತ್ತು ಚುನಾವಣಾ ಆಯೋಗ ವಶಪಡಿಸಿಕೊಂಡಿದ್ದವು.
ಆದರೂ ಕಾಲೇಜಿನ ಎಲ್ಲಾ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಯಾವ ತರಗತಿಯೂ ಖಾಲಿ ಉಳಿಯದಂತೆ ವೇಳಾಪಟ್ಟಿಯಂತೆ ತರಗತಿ ನಡೆದಿದೆ. ನಮ್ಮ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವೇಳಾಪಟ್ಟಿಯಂತೆ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಹಾಗಾಗಿ ಕಾಲೇಜಿನಲ್ಲಿ ಯಾವುದೇ ಲೋಪದೋಷಗಳು ಇಲ್ಲ ಎಂದು ಉತ್ತರ ನೀಡಿದರು.
ನಂತರ ಮಾತು ಮುಂದುವರೆಸಿದ ಶಾಸಕ ಟಿ.ರಘುಮೂರ್ತಿ, ಕಾಲೇಜಿನಲ್ಲಿ ಹಾಜರಾತಿ ಕಡ್ಡಾಯಗೊಳಿಸಿ ಮತ್ತು ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅತಿ ಜರೂರಾಗಿ ಜಾರಿಗೆ ತರಬೇಕು. ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.
ಇದೇವೇಳೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಬಿ.ಯು.ನರಸಿಂಹಮೂರ್ತಿ, ಪ್ರೊ.ಎನ್.ಈರಣ್ಣ, ಪ್ರೊ.ರಂಗಸ್ವಾಮಿ, ಪ್ರೊ.ಡಿ.ಎನ್.ರಘುನಾಥ್, ಪ್ರೊ.ಪಿ.ತಿಪ್ಪೇಸ್ವಾಮಿ, ಪ್ರೊ.ಎ.ಎಂ.ಜಗದೀಶ್ವರಿ, ಪ್ರೊ.ಜಮುನಾರಾಣಿ, ಗ್ರಂಥಪಾಲಕ ಡಾ.ಪಾಪಣ್ಣ ಅವರೂ ಇದ್ದರು.

Namma Challakere Local News
error: Content is protected !!